ದುಬೈ: ಚಿನ್ನದ ವಹಿವಾಟಿನಲ್ಲಿ ಭಾರತಕ್ಕೆ ಆಗ್ರಸ್ಥಾನ

ಗುರುವಾರ, 25 ಅಕ್ಟೋಬರ್ 2007 (11:11 IST)
ದುಬೈ ಮತ್ತು ಭಾರತದ ನಡುವಣ ಚಿನ್ನದ ಮಾರಾಟ ವಹಿವಾಟಿನಲ್ಲಿ ಅಗ್ರಸ್ಥಾನ ಪಡೆದಿದ್ದು, ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಶೇ 55 ಹೆಚ್ಚಳವಾಗಿದೆ ಎಂದು ವ್ಯಾಪಾರಿ ಮೂಲಗಳು ತಿಳಿಸಿವೆ.

ಕಳೆದ ವರ್ಷ ದುಬೈ ಮತ್ತು ಭಾರತದ ಮಧ್ಯೆ ಚಿನ್ನದ ವಹಿವಾಟು 3.37 ಬಿಲಿಯನ್ ಡಾಲರ್‌ಗಳಿದ್ದು, ಪ್ರಸಕ್ತ ಸಾಲಿನ 2007ರ ಮೂರನೇ ತ್ರೈಮಾಸಿಕ ಅಂತ್ಯದಲ್ಲಿ 5.23 ಬಿಲಿಯನ್ ಡಾಲರ್‌ಗಳಿಗೆ ಏರಿದ್ದು ಪ್ರತಿಶತ 55 ರಷ್ಟು ಹೆಚ್ಚಳವಾಗಿದೆ ಎಂದು ಮೂಲಗಳು ತಿಳಿಸಿವೆ.

ದುಬೈನ ವಹಿವಾಟು ಪಾಲುದಾರರಾದ ಸ್ವಿಟ್ಜರ್‌ಲ್ಯಾಂಡ್, ಮಲೇಷೀಯಾ, ಸೇರಿದಂತೆ ಅನೇಕ ರಾಷ್ಟ್ರಗಳು ಚಿನ್ನದ ವಹಿವಾಟಿನಲ್ಲಿ ಪಾಲ್ಗೊಳ್ಳುತ್ತಿವೆ.

ಭಾರತ ಮತ್ತು ಸ್ವಿಟ್ಜರ್‌ಲ್ಯಾಂಡ್ ದೇಶಗಳು ದುಬೈನಿಂದ ಚಿನ್ನದ ಅಮುದು ಮಾಡಿಕೊಳ್ಳುವಲ್ಲಿ ಪ್ರಥಮ ಸ್ಥಾನದಲ್ಲಿವೆ. ಚಿನ್ನದ ರಫ್ತು ವಹಿವಾಟಿನಲ್ಲಿ ಭಾರತ, ಆಸ್ಟ್ರೇಲಿಯಾ,ಮಲೇಷೀಯಾ ಅಮೆರಿಕ ಮತ್ತು ಸ್ವಿಟ್ಜರ್‌ಲ್ಯಾಂಡ್ ದೇಶಗಳು ಉನ್ನತ ಸ್ಥಾನವನ್ನು ಪಡೆದಿವೆ.

2006 ರಲ್ಲಿ 118 ಟನ್ ಚಿನ್ನವನ್ನು ದುಬೈನಿಂದ ಅಮುದು ಮಾಡಿಕೊಳ್ಳಲಾಗಿತ್ತು. 2007 ರ ತ್ರೈಮಾಸಿಕ ಸಾಲಿನಲ್ಲಿ ದುಬೈನಿಂದ 174 ಟನ್ ಚಿನ್ನವನ್ನು ಅಮುದು ಮಾಡಿಕೊಳ್ಳಲಾಗಿದ್ದು ಶೇ 47 ರಷ್ಟು ಹೆಚ್ಚಳವಾಗಿದೆ ಎಂದು ಡಿಎಂಸಿಸಿ ತಿಳಿಸಿದೆ.

ವೆಬ್ದುನಿಯಾವನ್ನು ಓದಿ