ನೈಸರ್ಗಿಕ ಅನಿಲದ ಬೆಲೆ ಹೆಚ್ಚಳವನ್ನು ತಡೆದ ಚುನಾವಣಾ ಆಯೋಗ

ಮಂಗಳವಾರ, 25 ಮಾರ್ಚ್ 2014 (16:45 IST)
PR
ರಿಲಯನ್ಸ್‌‌ ಇಂಡಸ್ಟ್ರೀಸ್‌ ಮತ್ತು ಇತರ ಕಂಪೆನಿಗಳು ನೈಸರ್ಗಿಕ ಅನಿಲದ ಬೆಲೆಯನ್ನು ಹೆಚ್ಚಳ ಮಾಡದಿರಲು ಚುನಾವಣಾ ಆಯೋಗ ತಿಳಿಸಿದೆ. ಮುಂದಿನ ತಿಂಗಳು ನೈಸರ್ಗಿಕ ಅನಿಲದ ದರದಲ್ಲಿ ಹೆಚ್ಚಳ ಮಾಡಲು ಕಂಪೆನಿಗಳು ನಿರ್ಧರಿಸಿದ್ದವು ಆದರೆ ಕೇಂದ್ರ ಸರ್ಕಾರಕ್ಕೆ ಚುನಾವಣಾ ಆಯೋಗ ಈ ಬೆಲೆ ಹೆಚ್ಚಳ ಮಾಡದಿರುವಂತೆ ಕೇಂದ್ರ ಸರಕಾರಕ್ಕೆ ತಾಕೀತು ಮಾಡಿದೆ.

ದೇಶದಲ್ಲಿ ಲೋಕಸಭೆ ಚುನಾವಣೆಯಿಂದಾಗಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ದರ ಏರಿಕೆ ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ ಎಂದು ಕೇಂದ್ರಕ್ಕೆ ಸಂದೇಶ ರವಾನಿಸಿದೆ.

ಈ ಸಂಬಂಧ ಪೆಟ್ರೋಲಿಯಂ ಸಚಿವ ಸೌರಭ ಚಂದ್ರಾರಿಗೆ ಕೇಂದ್ರ ಚುನಾವಣಾ ಆಯೋಗ ನಿನ್ನೆ ಸಂಜೆ ಒಂದು ಪತ್ರವನ್ನು ಕಳುಹಿಸಿದೆ.

ಆಯೋಗದ ಈ ನಿರ್ಧಾರದ ನಂತರ ಈಗಿನ ಪ್ರಸಕ್ತ ಸರ್ಕಾರವನ್ನು ಹೊರತುಪಡಿಸಿ, ಹೊಸ ಸರ್ಕಾರ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರದ ಎಲ್ಲಾ ನೈಸರ್ಗಿಕ ಅನಿಲ ಉತ್ಪಾದಿಸುವ ಕಂಪೆನಿಗಳು ಮುಂದಿನ ತಿಂಗಳಲ್ಲಿ ತಮ್ಮ ಬೆಲೆಯನ್ನು ಹೆಚ್ಚಿಸಲು ನಿರ್ಧರಿಸಿದ್ದವು ಆದರೆ ಚುನಾವಣಾ ನೀತಿ ಸಂಹಿತೆಯಿಂದಾಗಿ ಈ ನಿರ್ಧಾರಕ್ಕೆ ತಡೆ ಹಿಡಿಯಲಾಗಿದೆ.



ವೆಬ್ದುನಿಯಾವನ್ನು ಓದಿ