ಫೇಸ್‌‌‌‌‌‌ಬುಕ್‌‌‌ನಲ್ಲಿ ಬಗ್‌‌ ರಿಪೋರ್ಟ್‌ ಮಾಡುವಲ್ಲಿ ಭಾರತ ಮೊದಲನೇ ಸ್ಥಾನದಲ್ಲಿದೆ

ಮಂಗಳವಾರ, 8 ಏಪ್ರಿಲ್ 2014 (16:21 IST)
PR
ಇತ್ತೀಚಿನ ದಿನಗಳಲ್ಲಿ ಫೇಸ್‌‌ಬುಕ್‌‌ ಬಳಕೆ ಹೆಚ್ಚಾಗುತ್ತಿದೆ. ಫೇಸ್‌‌‌ಬುಕ್‌‌‌‌ನಲ್ಲಿ ಬಗ್‌ ಬೌಂಟಿ ಕಾರ್ಯಕ್ರಮದ ಮೂಲಕ ತಿಳಿದು ಬಂದ ವಿಷಯವೇನೆಂದರೆ ಕಳೆದ ವರ್ಷ ಬಗ್ ರಿಪೋರ್ಟ್ ಮಾಡುವಲ್ಲಿ ಭಾರತ ಮೊದಲನೇ ಸ್ಥಾನದಲ್ಲಿದೆ. ದೇಶದಲ್ಲಿ ಕನಿಷ್ಠ 9.3 ಕೋಟಿ ಜನರು ಫೇಸ್‌ಬುಕ್ ಬಳಕೆ ಮಾಡುತ್ತಿದ್ದಾರೆ.

2013ರಲ್ಲಿ ಒಟ್ಟು 14,763 ಜನರಿಗೆ ಪುರಸ್ಕಾರ ಲಭಿಸಿದೆ ಇದರಲ್ಲಿ 687 ಭಾರತೀಯರು ಆಗಿದ್ದಾರೆ ಎಂದು ಕ್ಯಾಲಿಫೋರ್ನಿಯಾದ ಮುಖ್ಯಾಲಯದ ಕಂಪೆನಿ ಫೇಸ್‌ಬುಕ್ ತಿಳಿಸಿದೆ.

ವಿಶ್ವಾದ್ಯಂತ ಫೇಸ್‌ಬುಕ್‌ ಬಳಕೆದಾರರ ಸಂಖ್ಯೆ 1.2 ಅರಬ್‌‌ ಇದೆ. ಕಂಪೆನಿ ಕಳೆದ ವರ್ಷ ಬಗ್‌ ರಿಪೋರ್ಟ್‌‌ ಮಾಡುವವರನ್ನು ಹುಡುಕಲು 15 ಲಕ್ಷ ಡಾಲರ್‌ ಖರ್ಚು ಮಾಡಿದೆ .

ಎಲ್ಲಕ್ಕಿಂತ ಹೆಚ್ಚು 136 ಬಗ್‌‌‌ ಭಾರತದಿಂದ ರಿಪೋರ್ಟ್ ಮಾಡಲಾಗಿದೆ. ಇದರಲ್ಲಿ ಇವರಿಗೆ 1,353 ಡಾಲರ್‌ ಪುರಸ್ಕಾರ ಲಭಿಸಿದೆ .

ವೆಬ್ದುನಿಯಾವನ್ನು ಓದಿ