ವೋಟ್‌‌ ಮಾಡಿ, ಕಡಿಮೆ ಬೆಲೆಯಲ್ಲಿ ಪೆಟ್ರೋಲ್‌‌ ಖರೀದಿಸಿ

ಬುಧವಾರ, 9 ಏಪ್ರಿಲ್ 2014 (16:43 IST)
PR
ದೆಹಲಿ ಮತ್ತು ದೆಹಲಿ ಹತ್ತಿರವಿರುವ ಪ್ರದೇಶಗಳಲ್ಲಿ ಮತದಾನ ಮಾಡುವವರಿಗೆ ಒಂದು ಖುಷಿಯಾದ ಸುದ್ದಿಯೊಂದಿದೆ. ಮತದಾನದ ನಂತರ ಕಡಿಮೆ ಬೆಲೆಯಲ್ಲಿ ಪೆಟ್ರೋಲ್‌‌‌‌‌ ಖರೀದಿಸಬಹುದಾಗಿದೆ.

ದೆಹಲಿ, ನೋಯಿಡಾ ಗುಡಗಾಂವ್ ಮತ್ತು ರೊಹತಕ್‌‌ನಲ್ಲಿ ಸುಮಾರು 67 ಪೆಟ್ರೋಲ್‌‌ ಪಂಪ್‌‌‌ನಲ್ಲಿ 10 ಎಪ್ರಿಲ್‌‌‌ರಂದು ಮತದಾನನ ಮಾಡಿ ಪೆಟ್ರೋಲ್‌ ಖರೀದಿಸಲು ಬಂದವರಿಗೆ ಪ್ರತಿ ಲೀಟರ್‌ ಪೆಟ್ರೋಲ್‌‌‌‌ ಬೆಲೆಯಲ್ಲಿ 50 ಪೈಸೆ ರಿಯಾಯತಿ ಸಿಗಲಿದೆ.

ಪೆಡ್‌‌‌ರೆಶನ್‌‌ ಆಫ್‌‌ ಆಯಿಲ್‌ ಇಂಡಿಯಾ ಪೆಟ್ರೋಲಿಯಂ ಟ್ರೆಡರ್ಸನ ಮುಖ್ಯಸ್ಥ ಅಜಯ್‌ ಬನ್ಸಲ್‌ ಈ ಮಾಹಿತಿ ನೀಡಿದ್ದಾರೆ.

ಈ ರಿಯಾಯತಿ ಆಫರ್ ಕೇವಲ ಮತದಾನದ ಸಮಯದವರೆಗೆ ಮಾತ್ರ ಇರಲಿದೆ ಎಂದು ಅಜಯ್‌ ತಿಳಿಸಿದ್ದಾರೆ. ಮತದಾನ ಮಾಡಿ ಬಂದ ಜನರು ಪೆಟ್ರೋಲ್‌ ಖರೀದಿಸಲು ಬಂದರೆ ಪ್ರತಿ ಲೀಟರ್‌‌ ಪೆಟ್ರೋಲ್‌‌ನಲ್ಲಿ 50 ಪೈಸೆ ರಿಯಾಯತಿ ನೀಡಲಾಗುವುದು.

ದ್ವಿಚಕ್ರ ವಾಹನ ಸವಾರಗಾರರು ತಾವು ಮತದಾನ ಮಾಡಿದ ನಂತರ ಬೆರಳಿಗೆ ಹಚ್ಚಲಾದ ಮಸಿಯನ್ನು ತೋರಿಸಿಬೇಕಾಗುತ್ತದೆ. ಆಗ ಪೆಟ್ರೋಲ್‌‌ ಬೆಲೆಯಲ್ಲಿ 50 ಪೈಸೆ ರಿಯಾಯತಿ ಸಿಗುತ್ತದೆ. ಮತದಾನ ಮಾಡಲು ಪ್ರೋತ್ಸಾಹ ನಿಡುವುದಕ್ಕಾಗಿ ಈ ಆಪರ್‌‌ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ