ಶೀಘ್ರದಲ್ಲಿಯೇ ಹೊಸ ಬ್ಯಾಂಕ್‌‌ಗಳಿಗೆ ಪರವಾನಿಗಿ : ರಾಜನ್‌

ಶನಿವಾರ, 8 ಮಾರ್ಚ್ 2014 (13:34 IST)
PR
ನವದೆಹಲಿ: ಕೇಂದ್ರ ಚುನಾವಣಾ ಆಯೋಗದ ಅನುಮತಿ ಪಡೆದ ನಂತರ ಮುಂದಿನ ಕೆಲವು ವಾರಗಳ ನಂತರ ಹೊಸ ಬ್ಯಾಂಕ್‌‌ಗಳಿಗೆ ಲೈಸನ್ಸ್‌ ನೀಡಲಾಗುವುದು ಎಂದು ರಿಸರ್ವ್ ಬ್ಯಾಂಕ್‌ನ ಗವರ್ನರ್‌ ರಘುರಾಮ್ ರಾಜನ್ ತಿಳಿಸಿದ್ದಾರೆ.

ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರದ ಹಲವಾರು ಕಂಪೆನಿಗಳು ಲೈಸನ್ಸ್‌ಗಾಗಿ ಅರ್ಜಿ ಸಲ್ಲಿಸಿವೆ. ಇದರಲ್ಲಿ ಭಾರತೀಯ ಅಂಚೆ ಇಲಾಖೆ ಮತ್ತು ಐಎಫ್‌‌ಸಿಐ ಹೊರತು ಪಡಿಸಿ ಅನಿಲ್ ಅಂಬಾನಿ ಮತ್ತು ಆದಿತ್ಯ ಬಿರ್ಲಾ ಕೂಡ ಈ ಲೈಸನ್ಸ್ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. ಪರಿಶೀಲನೆ ನಂತರ ರಿಸರ್ವ್ ಬ್ಯಾಂಕ್ ಕೆಲವು ಬ್ಯಾಂಕ್‌ಗಳಿಗೆ ಲೈಸನ್ಸ್‌ ನೀಡಲಾಗುವುದು ಎಂದು ರಾಜನ್ ತಿಳಿಸಿದ್ದಾರೆ.

ರಿಸರ್ವ್ ಬ್ಯಾಂಕ್‌ನ ಕೇಂದ್ರಿಯ ನಿರ್ದೇಶಕರ ಸಭೆಯಲ್ಲಿ ವಿತ್ತ ಮಂತ್ರಿ ಪಿ.ಚಿದಂಬರಂ ಭಾಷಣದ ಮುಕ್ತಾಯದ ನಂತರ ಮಾತನಾಡಿದ ರಾಜನ್, ಕಾರ್ಯಗಳು ನಿಗದಿತ ಸಮಯದಲ್ಲಿ ಅಂತ್ಯಗೊಂಡಲ್ಲಿ ಮುಂದಿನ ಕೆಲವೇ ವಾರಗಳಲ್ಲಿ ಹೊಸ ಬ್ಯಾಂಕ್‌ಗಳಿಗೆ ಲೈಸನ್ಸ್ ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ರಘುರಾಮ್ ರಾಜನ್ ತಿಳಿಸಿದ್ದಾರೆ .

ವೆಬ್ದುನಿಯಾವನ್ನು ಓದಿ