ನಾಳೆಯಿಂದ ನಡೆಯಬೇಕಿದ್ದ ಕೋಲ್ ಇಂಡಿಯಾ ಕಾರ್ಮಿಕರ ಮುಷ್ಕರ ರದ್ದು

ಭಾನುವಾರ, 22 ಸೆಪ್ಟಂಬರ್ 2013 (13:31 IST)
PR
PR
ಮುಂಬೈ: ಕೋಲ್ ಇಂಡಿಯಾ ಲಿ.ನ ಕಾರ್ಮಿಕ ಸಂಘಗಳು ಸೆಪ್ಟೆಂಬರ್ 23ರಿಂದ ನಡೆಸಬೇಕಿದ್ದ ಮೂರು ದಿನಗಳ ಮುಷ್ಕರವನ್ನು ಡಿಸೆಂಬರ್‌ಗೆ ಮುಂದೂಡಿದೆ. ಕಂಪನಿ ಅಧಿಕಾರಿಗಳ ಜತೆ ಮಾತುಕತೆ ಬಳಿಕ ಕಾರ್ಮಿಕ ಒಕ್ಕೂಟಗಳು ಈ ನಿರ್ಧಾರ ಕೈಗೊಂಡಿವೆ. ಕೋಲ್ ಇಂಡಿಯಾದ ಐದು ಕಾರ್ಮಿಕ ಸಂಘಗಳು ಮುಷ್ಕರದ ನೋಟೀಸ್ ನೀಡಿದ್ದವು. ಕಂಪೆನಿಯ ಶೇ. 5ರಷ್ಟು ಷೇರುಗಳನ್ನು ಮಾರುವ ಸರ್ಕಾರದ ನಿರ್ಧಾರವನ್ನು ಅವು ಮುಖ್ಯವಾಗಿ ಪ್ರತಿಭಟಿಸಿವೆ.

ಸ್ವಯಂ ನಿವೃತ್ತಿಗೆ ಸಂಬಂಧಿಸಿದ ಅವರ ಬೇಡಿಕೆಗಳಿಗೆ ಒಪ್ಪಿಕೊಂಡ ಬಳಿಕ ಅವರು ಮುಷ್ಕರವನ್ನು ಡಿಸೆಂಬರ್‌ಗೆ ಮುಂದೂಡಿದ್ದಾರೆ ಎಂದು ನಿರ್ದೇಶಕ ಆರ್. ಮೋಹನ್ ದಾಸ್ ತಿಳಿಸಿದ್ದಾರೆ. ಸರ್ಕಾರ ಕೋಲ್ ಇಂಡಿಯಾ ಷೇರುಗಳನ್ನು ಮಾರಾಟ ಮಾಡಿ 40,000 ಕೋಟಿ. ರೂ.ಗಳನ್ನು ಪ್ರಸಕ್ತ ವರ್ಷದಲ್ಲಿ ಸಂಗ್ರಹಿಸಲು ನಿರ್ಧರಿಸಿದೆ.

ವೆಬ್ದುನಿಯಾವನ್ನು ಓದಿ