ಅಕ್ಷಯ ತೃತೀಯ: ಚಿನ್ನ, ಬೆಳ್ಳಿ ದರದಲ್ಲಿ ಅಲ್ಪ ಕುಸಿತ

ಸೋಮವಾರ, 2 ಮೇ 2011 (20:21 IST)
PTI
ಜಾಗತಿಕ ಮಾರುಕಟ್ಟೆಗಳ ದುರ್ಬಲ ವಹಿವಾಟಿನಿಂದಾಗಿ ಗಗನಕ್ಕೇರಿದ್ದ ಚಿನ್ನದ ದರ ಪ್ರತಿ 10 ಗ್ರಾಂಗೆ 335 ರೂಪಾಯಿಗಳ ಕುಸಿತ ಕಂಡು 22,840 ರೂಪಾಯಿಗಳಿಗೆ ತಲುಪಿದೆ.

ಕೈಗಾರಿಕೋದ್ಯಮ ಕ್ಷೇತ್ರದ ಬೇಡಿಕೆಯಿಂದಾಗಿ ಬೆಳ್ಳಿಯ ದರದಲ್ಲಿ ಕೂಡಾ, ಪ್ರತಿ ಕೆಜಿಗೆ 3700 ರೂಪಾಯಿಗಳ ಕುಸಿತವಾಗಿ 67,800 ರೂಪಾಯಿಗಳಿಗೆ ತಲುಪಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.

ಬೆಳ್ಳಿಯ ನಾಣ್ಯಗಳ (100 ನಾಣ್ಯಗಳು) ದರದಲ್ಲಿ ಕೂಡಾ 4,500 ರೂಪಾಯಿಗಳ ಇಳಿಕೆಯಾಗಿ 72,500 ರೂಪಾಯಿಗಳಿಗೆ ತಲುಪಿದೆ.

ಬೆಳ್ಳಿಯ ದರ ಫ್ಯೂಚರ್ ಮಾರುಕಟ್ಟೆಯಲ್ಲಿ ಶೇ.13ರಷ್ಟು ಕುಸಿತ ಕಾಣಲಿದೆ ಎನ್ನುವ ವರದಿಗಳ ಹಿನ್ನೆಲೆಯಲ್ಲಿ, ಹೂಡಿಕೆದಾರರು, ಸಂಗ್ರಹಕಾರರು ಖರೀದಿಗಿಂತ ಮಾರಾಟಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ ಎಂದು ವರ್ತಕರು ತಿಳಿಸಿದ್ದಾರೆ.

ಸಾಗರೋತ್ತರ ಮಾರುಕಟ್ಟೆಗಳಲ್ಲಿ ಚಿನ್ನದ ದರ ಪ್ರತಿ ಔನ್ಸ್‌ಗೆ 9.30 ಡಾಲರ್‌ಗಳ ಕುಸಿತವಾಗಿ 1,556.40 ಡಾಲರ್‌ಗಳಿಗೆ ತಲುಪಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ