ಅನಿಲ ಕೊಳವೆ ಜಾಲದಲ್ಲಿ ಹಿಂದುಳಿದ ಭಾರತ: ಅಸೋಚಮ್

ಮಂಗಳವಾರ, 6 ಮೇ 2008 (18:02 IST)
ನವದೆಹಲಿ: ಭಾರತದ ಅನಿಲ ಕೊಳವೆ ಜಾಲವು ನೆರೆಯ ಪಾಕಿಸ್ತಾನಕ್ಕೆ ಹೋಲಿಸಿದರೆ ಹಿಂದುಳಿದಿದೆ ಎಂದು ಔದ್ಯಮಿಕ ಮಂಡಳಿ ಅಸೋಚಮ್ ಹೇಳಿದೆ. ಪಾಕಿಸ್ತಾನ 1050 ನಗರಗಳಿಗೆ ಅನಿಲ ಪೂರೈಕೆ ಸಂಪರ್ಕಗೊಳಿಸಿದ್ದರೆ, ಭಾರತ ಕೇವಲ 20 ನಗರಗಳಿಗೆ ಮಾತ್ರ ಸಂಪರ್ಕ ಕಲ್ಪಿಸಿದೆ ಎಂದು ಅದು ಅಭಿಪ್ರಾಯಿಸಿದೆ.

ಪಾಕಿಸ್ತಾನ ಮತ್ತು ಭಾರತ ನಡುವಿನ ಅನಿಲ ಕೊಳವೆ ಮಾರ್ಗದ ಹೊಲಿಕೆ ಕುರಿತ ಪ್ರಬಂಧ ಮಂಡಿಸಿರುವ ಅಸೋಚಾಮ್, ಪ್ರಸ್ತುತ ಪಾಕಿಸ್ತನದ ಅನಿಲ ಕೊಳವೆಯ ಸಾಂದ್ರತೆಯು ಪ್ರತಿ ದಿನ 1044 ಕಿ.ಮೀ.ಇದ್ದರೆ, ಭಾರತ ಕೇವಲ 116 ಕಿ.ಮೀ.ನಷ್ಟಿದೆ ಎಂದು ಹೇಳಿದೆ.

ನೆರೆಯ ರಾಷ್ಟ್ರವು ದೂರ ಪ್ರದೇಶದಲ್ಲಿ ವಾಸಿಸುವ ದೇಶೀಯ ಮತ್ತು ವಾಣಿಜ್ಯ ಗ್ರಾಹಕರಿಗೆ ಅಗತ್ಯವಾದ ಅನಿಲ ಪೂರೈಕೆಗೆ 31,000 ಸಾವಿರ ಕಿ.ಮೀ.ನಷ್ಟು ವಿತರಣಾ ಜಾಲ ಹೊಂದಿದ್ದರೆ, ಭಾರತ ಕೇವಲ 11,000 ಸಾವಿರ ಕಿ.ಮೀ. ವ್ಯಾಪ್ತಿಯ ವಿತರಣಾ ಜಾಲ ಹೊಂದಿದೆ ಎಂದು ಅದು ತಿಳಿಸಿದೆ.

ವೆಬ್ದುನಿಯಾವನ್ನು ಓದಿ