ಅಮೆರಿಕದ ಐಟಿ ಕಂಪೆನಿ ಖರೀದಿಸಿದ ವಿಪ್ರೋ ಟೆಕ್ನಾಲಾಜೀಸ್

ಶನಿವಾರ, 2 ಏಪ್ರಿಲ್ 2011 (11:45 IST)
PTI
ದೇಶದ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ವಿಪ್ರೋ ಟೆಕ್ನಾಲಾಜೀಸ್, ಅಮೆರಿಕ ಮೂಲದ ಸೈನ್ಸ್ ಅಪ್ಲಿಕೇಶನ್ಸ್ ಇಂಟರ್‌ನ್ಯಾಷನಲ್ ಕಾರ್ಪೋರೇಶನ್ (ಎಸ್‌ಎಐಸಿ) ಕಂಪೆನಿಯನ್ನು 670 ಕೋಟಿ ರೂಪಾಯಿಗಳನ್ನು ಪಾವತಿಸಿ ಖರೀದಿಸಿದೆ.

ಕಳೆದ ವರ್ಷದ ಅವಧಿಯಲ್ಲಿ ವಿಪ್ರೋ ಸಂಸ್ಥೆ, ಅಮೆರಿಕದ ಇನ್ಫೋಕ್ರಾಸಿಂಗ್ ಕಂಪೆನಿಯನ್ನು 600 ಮಿಲಿಯನ್ ಡಾಲರ್‌ಗಳಿಗೆ ಖರೀದಿಸಿತ್ತು.

ಎಸ್‌ಎಐಸಿ ಸಂಸ್ಥೆ, ಸೈಂಟಿಫಿಕ್, ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಹೊಂದಿದ 10 ಬಿಲಿಯನ್ ಡಾಲರ್ ಕಂಪೆನಿಯಾಗಿದ್ದು, ಭಾರತದ ನೊಯಿಡಾ ಮತ್ತು ಬೆಂಗಳೂರಿನಲ್ಲಿ ಶಾಖೆಗಳನ್ನು ಹೊಂದಿದೆ. ಆಯಿಲ್ ಆಂಡ್ ಗ್ಯಾಸ್ ಇನ್‌ಫಾರ್ಮೇಶನ್ ಟೆಕ್ನಾಲಾಜಿ ವಹಿವಾಟಿನಲ್ಲಿ ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿದೆ ಎಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ.

ಎಸ್‌ಎಐಸಿ ಸಂಸ್ಥೆಯ 1450 ಉದ್ಯೋಗಿಗಳು ಇದೀಗ ವಿಪ್ರೋ ಸಂಸ್ಥೆಯ ಶಾಖೆಗಳಿರುವ ಉತ್ತರ ಅಮೆರಿಕ, ಯುರೋಪ್, ಭಾರತ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ವರ್ಗಾವಣೆ ಮಾಡಲಾಗುತ್ತಿದೆ ಎಂದು ಕಂಪೆನಿಯ ವಕ್ತಾರರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ