ಅಮೆರಿಕಾ: ಬಿಲಿಯನೇರ್ ಉದ್ಯಮಿಯಿಂದ 1200 ಕೋಟಿಯ ವಿಮೆ!

ಸೋಮವಾರ, 17 ಮಾರ್ಚ್ 2014 (16:58 IST)
PR
ವಾಷಿಂಗ್ಟನ್ : ಅಮೆರಿಕಾದ ಒಬ್ಬ ಬಿಲಿಯನೇರ್ 1200 ಕೋಟಿ ರೂಪಾಯಿಯ ಲೈಫ್‌ ಇನ್ಸುರೆನ್ಸ್‌ ಪಾಲಿಸಿ ಮಾಡಿಸಿದ್ದಾರೆ. ಈ ಪಾಲಿಸಿ ವಿಶ್ವದಲ್ಲಿಯೇ ಅತಿ ದೊಡ್ಡ ಮೊತ್ತದ ಪಾಲಿಸಿ ಆಗಿದೆ. ಇದಕ್ಕು ಮೊದಲ ಹಾಲಿವುಡ್ ಮುಗಲ್ ಡೆವಿಡ್‌ ಗಿಫನ್‌ ಎಂಬ ಹೆಸರನ ವ್ಯಕ್ತಿ 1990 ರಲ್ಲಿ 650 ಕೋಟಿ ರೂಪಾಯಿಯ ಪಾಲಸಿ ಮಾಡಿಸಿದ್ದರು, ಈ ರಿಕಾರ್ಡ್ ಅಮೆರಿಕಾದ ಬಿಲಿಯನೇರ್ ಮುರಿದಿದ್ದಾರೆ.

ಬೃಹತ್ ಮೊತ್ತದ ಪಾಲಿಸಿ ಮಾಡಿಸಿದ ಈ ಬಿಲಿಯನೇರ್ ಗಿನ್ನಿಸ್ ಬುಕ್ ಆಪ್ ವರ್ಲ್ಡ್ ರಿಕಾರ್ಡ್‌ನಲ್ಲಿ ತನ್ನ ಹೆಸರು ನೀಡಿದ್ದಾರೆ. ಆದರೆ 1200 ಕೋಟಿ ರೂಪಾಯಿ ಮೊತ್ತದ ಜೀವ ವಿಮೆ ಮಾಡಿಸಿದ ವ್ಯಕ್ತಿಯ ಹೆಸರು ಮಾತ್ರ ಗುಪ್ತವಾಗಿ ಇಡಲಾಗಿದೆ ಎಂದು ಅಮೆರಿಕಾದ ಮೂಲಗಳು ತಿಳಿಸಿವೆ.

ಅಷ್ಟೆ ಅಲ್ಲ ಈ ಪಾಲಿಸಿ ಮಾಡಿಸಲು ಕಾರಣವಾದ ವಿಮೆ ಏಜೆಂಟ್‌‌ ಡ್ರಾವಿ ಪ್ರಾಂಸೆಸ್‌ಗೆ ಕೂಡ ಗಿನಿಸ್ ಬುಕ್‌ನಲ್ಲಿ ಹೆಸರು ದಾಖಲಿಸಿದೆ. ಈ ಎಜೆಂಟ್ ಗಿಫಿನ್‌‌‌ರವರ ಪಾಲಿಸಿ ಮಾಡಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಭಾರತದಲ್ಲಿ ನೋಡಿದರೆ, 1996ರಲ್ಲಿ ಅಮಿತಾಬ್ ಬಚ್ಚನ್ 150 ಕೋಟಿ ರೂಪಾಯಿ ಪಾಲಿಸಿ ಮಾಡಿಸಿದ್ದರು . ಈ ಪಾಲಿಸಿ ದೇಶದಲ್ಲಿ ಅತಿ ದೊಡ್ಡ ಪಾಲಿಸಿಯಾಗಿತ್ತು. ಈ ಪಾಲಿಸಿ ಅಭಿಷೇಕ್ ಬಚ್ಚನ್ ಮಾಡಿಸಿದ್ದರಂತೆ ಈ ಪಾಲಿಸಿ ಮಾಡಿಸಿದ ಅಭಿಷೇಕ್ ಅವರಿಗೆ ಎಲ್‌ಐಸಿ ಸಂಸ್ಥೆ 30 ಕೋಟಿ ರೂಪಾಯಿಗಳ ಕಮಿಷನ್ ನೀಡಿತ್ತು.

ವೆಬ್ದುನಿಯಾವನ್ನು ಓದಿ