ಅರಬ್ ರಾಷ್ಟ್ರಗಳೊಂದಿಗೆ ಹೆಚ್ಚಿದ ವಹಿವಾಟು

ಸೋಮವಾರ, 24 ಸೆಪ್ಟಂಬರ್ 2007 (15:07 IST)
ಭಾರತ ಹಾಗೂ ಒಮನ್ ರಾಷ್ಟ್ರಗಳ ನಡುವಿನ ವ್ಯಾಪಾರ ಸಂಬಂಧವು ತ್ವರಿತ ಬೆಳವಣಿಗೆ ಕಾಣುತ್ತಿರುವುದರ ನಡುವೆಯೇ, ಒಮನ್‌ಗೆ ರಫ್ತು ಮಾಡುತ್ತಿರುವ ರಾಷ್ಟ್ರಗಳ ಪೈಕಿ ಭಾರತವು ಎರಡನೇ ಸ್ಥಾನದ ಮಾರುಕಟ್ಟೆಯನ್ನು ಹೊಂದಿದೆ. ಹಾಗೆಯೇ ಗಲ್ಫ್ ರಾಷ್ಟ್ರಗಳ ರಫ್ತು ಪೈಕಿ ತೃತೀಯ ಸ್ಥಾನವನ್ನು ಇದು ಹೊಂದಿದೆ.

ಕಳೆದ ವರ್ಷದ ಸಾಲಿಗೆ ಹೋಲಿಸಿದರೆ, 2007ನೇ ಋತುಮಾನದ ಮೊದಲ ಅವಧಿಯಲ್ಲಿ ರಫ್ತು ವ್ಯಾಪಾರ ಮೌಲ್ಯದಲ್ಲಿ ಸುಲ್ತಾನೇಟ್ಸ್‌ ವಿದೇಶಿ ವ್ಯಾಪಾರವು ಶೇ.0.2 ರಷ್ಟು ಕಡಿತಗೊಂಡಿದೆ ಎಂದು ಒಮನ್‌ನ ರಾಷ್ಟ್ರೀಯ ಆರ್ಥಿಕ ಸಚಿವಾಲಯವು ತಿಳಿಸಿದೆ.

ಇದರಿಂದ ಭಾರತವು ಒಮನ್ ರಾಷ್ಟ್ರಕ್ಕೆ ರಫ್ತು ಮಾಡುತ್ತಿರುವವ ಎರಡನೇ ದೊಡ್ಡ ಮಾರುಕಟ್ಟೆಯಾದರೆ, ಗಲ್ಫ್ ರಾಷ್ಟ್ರಗಳಿಗೆ ಮಾಡುತ್ತಿರುವ ರಫ್ತು ಪ್ರಮಾಣದಲ್ಲಿ ತೃತೀಯ ಸ್ಥಾನ ಹೊಂದಿದೆ.

ಪ್ರಸಕ್ತ ವರ್ಷದ ಕೊನೆಯ ಅವಧಿಯೊಳಗಾಗಿ ಭಾರತ ಹಾಗೂ ಒಮನ್ ರಾಷ್ಟ್ರಗಳ ನಡುವಿನ ವ್ಯಾಪಾರವು ಕನಿಷ್ಠ ಒಂದು ಶತಕೋಟಿ ಡಾಲರ್ ನಡೆಯುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ ಎಂದು ನವದೆಹಲಿಯ ರಾಯಭಾರಿ ಅನಿಲ್ ವಾಡ್ವಾ ಹೇಳಿದರು.

ವೆಬ್ದುನಿಯಾವನ್ನು ಓದಿ