ಆಯ್ದ ಉತ್ಪನ್ನಗಳ ಆಮದು ಸುಂಕ ಕಡಿತ

ಶುಕ್ರವಾರ, 30 ನವೆಂಬರ್ 2007 (15:58 IST)
ಸಿಂಗಾಪುರ್‌ದಿಂದ ಆಮದು ಮಾಡಿಕೊಳ್ಳತ್ತಿರುವ 555 ಉತ್ಪನ್ನ ವಸ್ತುಗಳ ಮೇಲಿನ ಆಮದು ಸುಂಕವನ್ನು ರದ್ದುಗೊಳಿಸಲು ಇಲ್ಲವೇ ಕಡಿತಗೊಳಿಸಲು ಭಾರತ ಸರಕಾರ ನಿರ್ಧರಿಸಿದೆ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪಿ.ಆರ್.ದಾಸ್‌ಮುನ್ಶಿ ತಿಳಿಸಿದ್ದಾರೆ.

ಭಾರತ-ಸಿಂಗಾಪುರ್ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಭಾರತ ಸರಕಾರ ಈ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು, ಈ ಆಮದು ಸುಂಕ ಕಡಿತದಿಂದಾಗಿ ಮುಂಬರುವ ದಿನಗಳಲ್ಲಿ ಉಭಯ ದೇಶಗಳ ಮಧ್ಯೆ ವ್ಯಾಪಾರ ವಹಿವಾಟು ಹೆಚ್ಚಿನ ಅಭಿವೃದ್ಧಿ ಹೊಂದಲಿದೆ ಎಂದವರು ಹೇಳಿದರು.

ಭಾರತ-ಸಿಂಗಾಪುರ್ ಉತ್ತೇಜಿತ ಆರ್ಥಿಕ ಸಹಕಾರ ಒಪ್ಪಂದದ ಅನ್ವಯ ಸಿಂಗಾಪುರ್‌ನ 555 ಉತ್ಪನ್ನಗಳ ಆಮದು ಸುಂಕ ರದ್ದುಗೊಳಿಸಲು ಗುರುವಾರ ಸೇರಿದ್ದ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದವರು ಸುದ್ದಿಗಾರರಿಗೆ ವಿವರಿಸಿದರು.

ಸಿಂಗಾಪುರ್ ವಸ್ತುಗಳ ಆಮದು ಸುಂಕದಲ್ಲಿ ಕಡಿತಗೊಳಿಸುವ ಆದೇಶ ಬರುವ ಡಿಸೆಂಬರ್ 1ರಿಂದ ಜಾರಿಯಾಗುತ್ತದೆ ಎಂದವರು ಹೇಳಿದ್ದು, ಇದರಿಂದಾಗಿ ಮುಂಬರುವ ದಿನಗಳಲ್ಲಿ ಎರಡೂ ದೇಶಗಳ ಮಧ್ಯೆ ವ್ಯಾಪಾರ ಉತ್ತೇಜನಕ್ಕೆ ನಾಂದಿಯಾಗಲಿದೆ ಎಂದವು ಅಭಿಪ್ರಾಯಪಟ್ಟರು.

ವೆಬ್ದುನಿಯಾವನ್ನು ಓದಿ