ಆರ್ಥಿಕ ಮುಗ್ಗಟ್ಟಿನ ಕರಿ ಛಾಯೆ : ಷೇರು ಬಂಡವಾಳದಲ್ಲಿ ಕೋಟಿ ಕೋಟಿ ನಷ್ಟ

ಭಾನುವಾರ, 18 ಆಗಸ್ಟ್ 2013 (15:18 IST)
PTI
PTI
ಮುಂಬೈ ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ ಕಂಡಿದೆ. ಅತಿದೊಡ್ಡ ಶೇರು ಬಂಡವಾಳ ಸಂಸ್ಥೆಗಳಲ್ಲಿ ಇಂತಹ ಭಾರೀ ಪ್ರಮಾಣದ ಇಳಿಕೆ ಕಂಡುಬಂದಿದ್ದು, ಕಳೆದ ವಾರದಲ್ಲಿ ಎಂಟು ಸೆನ್ಸೆಕ್ಸ್‌ ಸಂಸ್ಥೆಗಳಲ್ಲಿ ಸುಮಾರು 43,430 ಕೋಟಿ ರೂಪಾಯಿ ಇಳಿಕೆ ಕಂಡಿದೆ.

ಪ್ರತಿಷ್ಟಿತ ಎಂಟು ಸಂಸ್ಥೆಗಳು ರಿಲಾಯನ್ಸ್ ಇಂಡಿಯಾ ಲಿಮಿಟೆಡ್‌, ಟಾಟಾ ಕನ್ಸಲ್ಟೆನ್ಸಿ ಸರ್ವಿಸ್‌, ಸಿಐಎಲ್ (ಕೋಲ್ ಇಂಡಿಯಾ ಲಿಮಿಟೆಡ್) ಹಾಗೂ ಹೆಚ್‌ಡಿಎಫ್‌ಸಿ ಸೇರಿದಂತೆ ಒಂಭತ್ತು ಪ್ರತಿಷ್ಟಿತ ಸಂಸ್ಥೆಗಳು ನಷ್ಟಕ್ಕೆ ಒಳಗಾಗಿವೆ.


ಸೆನ್ಸೆಕ್ಸ್ ಅಂಕಿ ಅಂಶಗಳ ಪ್ರಕಾರ ಅತಿ ಹೆಚ್ಚು ನಷ್ಟಕ್ಕೆ ಒಳಗಾಗಿರುವುದು ರಿಲಾಯನ್ಸ್ ಸಂಸ್ಥೆ.

೧. ರಿಲಾಯನ್ಸ್ ಸಂಸ್ಥೆಗೆ ಒಟ್ಟಾರೆಯಾಗಿ 13,015 ಕೋಟಿ ರೂಪಾಯಿ ನಷ್ಟವಾಗಿದ್ದು ಅತಿ ಹೆಚ್ಚು ನಷ್ಟಕ್ಕೆ ಒಳಗಾದ 10 ಸಂಸ್ಥೆಗಳಲ್ಲಿ ರಿಲಾಯನ್ಸ್ ಅಗ್ರಸ್ಥಾನದಲ್ಲಿದೆ.

೨. ಟಾಟಾ ಸಂಸ್ಥೆಯು ಅತಿ ಹೆಚ್ಚು ನಷ್ಟಕ್ಕೊಳಗಾದ ಸಂಸ್ಥೆಗಳ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿಲದೆ. ಟಾಟಾ ಕನ್ಸಲ್ಟೆನ್ಸಿ ಸಂಸ್ಥೆಯು ಒಟ್ಟಾರೆಯಾಗಿ ಸುಮಾರು 12,888 ಕೋಟಿ ರೂಪಾಯಿಗಳಷ್ಟು ನಷ್ಟವನ್ನು ಹೊಂದಿದೆ.

೩. ಇನ್ನು ಕ್ರಮವಾಗಿ ಮೂರನೇ ಸ್ಥಾನದಲ್ಲಿ ಕೋಲ್ ಇಂಡಿಯಾ ಲಿಮಿಟೆಡ್ ಸಂಸ್ಥೆ. ಈ ಸಂಸ್ಥೆಯಲ್ಲಿ ಷೇರು ವ್ಯವಹಾರದಲ್ಲಿ ಸುಮಾರು 6,221 ಕೋಟಿ ರೂಪಾಯಿಗಳ ಇಳಿತ ಕಂಡಿದೆ.

೪. ಇನ್ನು HDFC ಕೂಡ ನಷ್ಟಕ್ಕೆ ಒಳಗಾಗಿದ್ದು ಸುಮಾರು 5,161 ಕೋಟಿ ರೂಪಾಯಿಗಳಷ್ಟು ಇಳಿಕೆಯನ್ನು ಕಂಡಿದೆ.

೫. ಐಟಿಸಿ ಮಾರುಕಟ್ಟಯಲ್ಲಿ ಕೂಡ ಭಾರಿ ಇಳಿಕೆ ಕಂಡಿದ್ದು 4,270 ಕೋಟಿಗಳಷ್ಟು ಇಳಿಮುಖವಾಗಿದೆ ಎಂದು ಅಂದಜಿಸಲಾಗಿದೆ.

೬. ಒಎನ್‌ಜಿಸಿ ಸಂಸ್ಥೆಯು 1,027 ಕೋಟಿ ರೂಪಾಯಿಗಳ ಇಳಿಕೆ ಕಂಡಿದೆ.

ಶೇರು ಮಾರುಕಟ್ಟೆಯಲ್ಲಿ ದಿನೇ ದಿನೇ ಇಳಿಕೆ ಉಂಟಾಗುತ್ತಿರುವುದು ಭಾರತದ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮವನ್ನು ಬೀರುತ್ತಿದೆ. ಆರ್ಥಿಕ ಪ್ರಧಾನಿಯಾದ ಮನಮೋಹನ್‌ ಸಿಂಗ್ " ದೇಶದಲ್ಲಿ ಆರ್ಥಿಕ ಮುಗ್ಗಟ್ಟು ಉದ್ಭವಿಸುವುದಿಲ್ಲ. 1991 ರ ಆರ್ಥಿಕ ಮುಗ್ಗಟ್ಟು ಮರುಕಳಿಸುವುದಿಲ್ಲ" ಎಂದು ಸಮಾಧಾನದ ಭರವಸೆ ನೀಡಿದ್ದಾರೆ. ಆದರೆ ಪ್ರಧಾನಿ ಭರವಸೆ ನೀಡಿರುವುದರ ಹಿನ್ನೆಲೆಯಲ್ಲಿಯೇ ಶೇರು ಮಾರುಕಟ್ಟೆಯಲ್ಲಿ ಇಷ್ಟೊಂದು ಪ್ರಮಾಣದ ಇಳಿಕೆ ಕಂಡು ಬಂದಿರುವುದು ಜನರನ್ನು ಇನ್ನಷ್ಟು ಆತಂಕಕ್ಕೀಡುಮಾಡಿದೆ.

ವೆಬ್ದುನಿಯಾವನ್ನು ಓದಿ