ಈಗ ಕಡಿಮೆದರದಲ್ಲಿ ಸ್ಪೈಸ್‌ಜೆಟ್‌‌ ವಿಮಾನದಲ್ಲಿ ಪ್ರಯಾಣಿಸಿ

ಬುಧವಾರ, 22 ಜನವರಿ 2014 (09:02 IST)
PR
ನವದೆಹಲಿ: ಸ್ಪೈಸ್‌ಜೆಟ್‌‌ ವಿಮಾನಯಾನದ ಕಂಪೆನಿ ಜನರಿಗೆ ಒಂದು ವಿಶೇಷ ಆಫ್‌ರ ನೀಡಿದೆ. 30 ದಿನಗಳ ಮೊದಲು ನೀವು ಪ್ರಯಾಣದ ಟಿಕೆಟ್‌ ಬುಕಿಂಗ್ ಮಾಡಿದ್ದರೆ ನಿಮಗೆ ಶೇ.50 ರಷ್ಟು ವಿನಾಯತಿ ಸಿಗಲಿದೆ ಎಂದು ಸ್ಪೈಸ್‌‌‌ಜೆಟ್‌‌ ಮೂಲಗಳು ತಿಳಿಸಿವೆ. ಜನೆವರಿ 21 ರಿಂದ 23ರ ಮಧ್ಯರಾತ್ರಿಯವರೆಗೆ ಈ ಆಫರ್ ಇದೆ. ಈ ರಿಯಾತತಿಯ ಮೂಲಕ ದೆಹಲಿಯಿಂದ ಗೊವಾಗೆ ಕೇವಲ 3300 ರೂಪಾಯಿಗಳಲ್ಲು ಪ್ರಯಾಣ ಬೆಳೆಸಬಹುದಾಗಿದೆ. ದೆಹಲಿಯಿಂದ ಮುಂಬೈಗೆ ಕೇವಲ 2800 ರೂಪಾಯಿಗಳಲ್ಲಿ ಸಂಚಾರ ಮಾಡಬಹುದಾಗಿದೆ.

ಮುಂಬೈನಿಂದ ಕೊಲ್ಕತ್ತಾಗೆ ಪ್ರಯಾಣಿಸಬೇಕಾದರೆ ಕನಿಷ್ಠ 3100 ರೂಪಾಯಿ, ಹೈದ್ರಾಬಾದ ನಿಂದ ಕೊಲ್ಕತ್ತಾಗೆ ಕೇವಲ 2700 ಮತ್ತು ದೆಹಲಿ-ಬೆಂಗಳೂರಿನ ಸಂಚಾರದ ದರ ಕೇವಲ 3400 ರೂಪಾಯಿಗಳು ಇರಲಿವೆ. ಫೆಬ್ರುವರಿನಿಂದ ಮಾರ್ಚ ತಿಮಗಳಿನವರೆಗೆ ಹೆಚ್ಚಿನ ಪ್ರಯಾಣ ಬೆಳೆಸುವುದಿಲ್ಲ ಎಂಬ ಕಾರಣ ಈ ಸಂಧರ್ಬ್ ದಲ್ಲಿ ಈ ರಿಯಾಯತಿ ನೀಡಿದರೆ ಜನರು ಹೆಚ್ಚಿಣ ಪ್ರಮಾಣದಲ್ಲಿ ವಿಮಾನಯಾನ ಸಂಚಾರ ನಡೆಸುತ್ತಾರೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ. ಸ್ಪೈಸ್‌ಜೆಟ್‌ ನಂತರ ಇತರ ವಿಮಾನಯಾನ ಕಂಪೆನಿಗಳು ಈ ಆಫ್‌ರ ನೀಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ