ಈಗ ಕೇವಲ 3,100 ರೂ.ಗಳಲ್ಲಿ ಗೂಗಲ್‌ ಆಂಡ್ರೈಡ್‌ ಮೊಬೈಲ್‌‌

ಶನಿವಾರ, 25 ಜನವರಿ 2014 (16:42 IST)
PR
ದೇಶದ ಮೊಬೈಲ್‌ ಮಾರುಕಟ್ಟೆಯಲ್ಲಿ ಸಾಕಷ್ಟು ಪೈಪೊಟಿ ನಡೆಯುತ್ತಿದೆ. ಈ ಪೈಪೊಟಿಯಲ್ಲಿ ಗೂಗಲ್ ಕಂಪೆನಿ ಮೋಟೋರೋಲಾ ಸ್ಮಾರ್ಟಫೋನ್‌‌ ಮಾರುಕಟ್ಟೆಗೆ ಪರಿಚಯಿಸಲು ನಿರ್ಧರಿಸಿದೆ.

ಟ್ರಸ್ಟೆಡ್‌ ರಿವಿವ್ಯೂಗೆ ಸಿಇವೋ ಡೇನಿಸ್ ವುಡಸಾಯಿಡ್‌‌ ನೀಡಿದ ಸಂದರ್ಶನದಲ್ಲಿ ಈ ಹೊಸ ಸ್ಮಾರ್ಟ್ ಬಗ್ಗೆ ತಿಳಿಸಿದ್ದಾರೆ. ಈ ಹೊಸ ಸ್ಮಾರ್ಟಫೋನ್‌‌‌‌ ಕೇವಲ 3,100 ರೂಪಾಯಿಗೆ ಸಿಗಲಿವೆ.

ಭಾರತದಲ್ಲಿ ಮೊಬೈಲ್‌ ಮಾರ್ಕೆಟ್‌‌ನಲ್ಲಿ ಕಿಂಗ್‌ ಎನಿಸಿಕೊಂಡ ಸಾಮಸುಂಗ್‌‌ ಎದುರು ಈ ಹೊಸ ಸ್ಮಾರ್ಟಫೋನ್ ಮೊಟೊರೋಲಾ ಬಿಡುಗಡೆ ಮಾಡಿದೆ. ಈ ಮೂಲಕ ಸಾಮಸುಂಗ್‌ ಕಂಪೆನಿಗೆ ಬಿಸಿ ತಟ್ಟಿದೆ. ಸಾಮಸುಂಗ್‌‌ನಲ್ಲಿರುವ ಎಲ್ಲಾ ಸೌಲಭ್ಯಗಳಿಗಿಳಂತ ಈ ಮೊಟೊರೊಲಾ ಮೊಬೈಲ್‌ ಹೆಚ್ಚಿನ ಸೌಲಭ್ಯಗಳು ಇವೆ. ಮತ್ತು ಈ ಮೊಬೈಲ್‌ ಕೇವಲ 3,100 ರೂಪಾಯಿಗೆ ಸಿಗಲಿದೆ. ಈ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಸಾಮಸುಂಗ್‌‌ ಮೊಬೈಲ್‌‌ಗೆ ಪೈಪೋಟಿ ನೀಡುವುದಂತು ಗ್ಯಾರೆಂಟಿಯಾಗಿದೆ.

ಇದರ ಜೊತೆಗೆ ಗೂಗಲ್‌‌ ಮೊಟೊ ಜಿ ಮತ್ತು ಮೊಟೊ ಎಕ್ಸ್‌ ಹೆಸರಿನ ಎರಡು ಸ್ಮಾರ್ಟ್‌ಫೋನ್‌‌ 15 ಸಾವಿರ ರೂಪಾಯಿಗಿಂತ ಕಡಿಮೆ ದರದಲ್ಲಿ ಬಿಡುಗಡೆ ಮಾಡಲಾಗಿದೆ . ಮೊಟೊರೊಲಾ ಸಿಇಓ ಡೆನಿಸ್‌‌ ಪ್ರಕಾರ ಮೊಬೈಲ್ ದರ 179 ಡಾಲರ್‌

2013ರಲ್ಲಿ ಗೂಗಲ್‌ ಎಗ್ಜಿಕ್ಯುಟಿವ್‌ ಚೇರಮೆನ್ ಎರಿಕ ಸ್ಮಿಥ್ " ನಾವು 50 ಡಾಲರ್‌‌ಗಿಂತ ಕಡಿಮೆ ಬೆಲೆಯ ಸ್ಮಾರ್ಟಪೋನ್ ಮಾರುಕಟ್ಟೆಗೆ ಪರಿಚಯಿಸಲಿದ್ದೆವೆ ಎಂದು ತಿಳಿಸಿದ್ದರು. ಈ ಮೂಲಕ ಮೊಟೊರೊಲಾ ಆಂಡ್ರೈಡ್‌ ಸ್ಮಾರ್ಟಫೋನ್ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ .

ವೆಬ್ದುನಿಯಾವನ್ನು ಓದಿ