ಈಗ ಬ್ಯಾಂಕಿನಲ್ಲಿ ಖಾತೆ ಇರದಿದ್ದರೂ ಎಟಿಎಂನಿಂದ ಹಣ ಪಡೆಯಬಹುದು

ಗುರುವಾರ, 13 ಫೆಬ್ರವರಿ 2014 (16:39 IST)
PR
ಮುಂಬೈ: ಈಗ ನೀವು ಯಾವುದೇ ಬ್ಯಾಂಕ್‌‌ನಲ್ಲಿ ಖಾತೆ ಹೊಂದಿರದಿದ್ದರೂ ಕೂಡ ಎಟಿಎಮ್‌‌ನಿಂದ ಹಣವನ್ನು ಪಡೆಯಬಹುದಾಗಿದೆ. ಆಶ್ಚರ್ಯ ಅನಿಸುತ್ತಿದೆಯಾ ಆದರೆ, ಇದು ನಿಜವಾದ ಸುದ್ದಿ . ರಿಸರ್ವ್ ಬ್ಯಾಂಕ್‌‌ನ ಗವರ್ನ್‌ರ ರಘುರಾಮ್ ರಾಜನ್‌ ಸಭೆಯೊಂದು ಉದ್ದೇಶಿಸಿ ಮಾತನಾಡುತ್ತಿರುವಾಗ ಈ ಹೊಸ ವಿಷಯವನ್ನು ತಿಳಿಸಿದ್ದಾರೆ.

ಪ್ರಸ್ತುತ ಬ್ಯಾಂಕ್ ಖಾತೆಯನ್ನು ಹೊಂದಿರುವ ಗ್ರಾಹಕ ತಮ್ಮ ಎಟಿಎಂ ಕಾರ್ಡ್ ಮೂಲಕ ಹಣವನ್ನು ಪಡೆಯಬಹುದಾಗಿದೆ. ಹೊಸ ಯೋಜನೆಯಲ್ಲಿ ಗ್ರಾಹಕರ ಗುರುತು ಮತ್ತು ಸುರಕ್ಷೆಯನ್ನು ಸಂಪೂರ್ಣವಾಗಿ ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ. ಇತ್ತೀಚೆಗಷ್ಟೆ ಆರ್‌ಬಿಐ ಹೊಸ ಯೋಜನೆಗೆ ಚಾಲನೆ ನೀಡಿದೆ ಎಂದು ರಾಜನ್ ತಿಳಿಸಿದ್ದಾರೆ.

ಹೊಸ ಯೋಜನೆಯನ್ವಯ ಬ್ಯಾಂಕ್ ಖಾತೆಯನ್ನು ಹೊಂದಿದ ವ್ಯಕ್ತಿ ಬ್ಯಾಂಕ್ ಖಾತೆಯಿರದ ಯಾವುದೇ ವ್ಯಕ್ತಿಗೆ ನೀವು ಹಣ ಕಳುಹಿಸಬಹುದಾಗಿದೆ. ಬ್ಯಾಂಕ್‌ ಖಾತೆಯನ್ನು ಹೊಂದಿದ ವ್ಯಕ್ತಿಯ ಹಣ ವರ್ಗಾವಣೆಯ ಮನವಿಯ ಮೇರೆಗೆ ಬ್ಯಾಂಕ್, ಹಣ ಪಡೆಯುವಾತನ ಮೊಬೈಲ್‌ಗೆ ಕೋಡ್ ಸಂದೇಶವನ್ನು ರವಾನಿಸುತ್ತದೆ. ಬ್ಯಾಂಕ್‌ನ ಕೋಡ್ ಸಂದೇಶವನ್ನು ಪಡೆದ ವ್ಯಕ್ತಿ ಯಾವುದೇ ಬ್ಯಾಂಕ್‌ನ ಎಟಿಎಂಗೆ ತೆರಳಿ ಅಲ್ಲಿ ಕೋಡ್ ಸಂಖ್ಯೆಯನ್ನು ದಾಖಲಿಸಿದಲ್ಲಿ ಹಣವನ್ನು ಪಡೆಯಬಹುದಾಗಿದೆ

ವೆಬ್ದುನಿಯಾವನ್ನು ಓದಿ