ಈರುಳ್ಳಿ ಕತ್ತರಿಸಿದರೆ ಕಣ್ಣಲ್ಲಿ ನೀರು ಬರೋದಿಲವಂತೆ ..!

ಶನಿವಾರ, 9 ನವೆಂಬರ್ 2013 (18:57 IST)
PR
ಅಡುಗೆ ಮನೆಯಲ್ಲಿ ಕೆಲಸ ಮಾಡುವವರಿಗೆ ಒಂದು ಶುಭ ಸುದ್ದಿ ಇದೆ. ಈರುಳ್ಳಿ ಕತ್ತರಿಸುವಾಗ ಕಣ್ಣಲ್ಲಿ ನೀರು ಬರುವುದು ಸಾಮಾನ್ಯ, ಆದರೆ ಇನ್ನು ಮುಂದೆ ಕಣ್ಣಲ್ಲಿ ನೀರು ಬರುವುದಿಲ್ಲ. ಹೌದು, ಇದು ಸತ್ಯ. ವಿಜ್ಞಾನಿಗಳು ಕಣ್ಣಿರು ಸುರಿಸದ ಈರುಳ್ಳಿ ಕಂಡು ಹಿಡಿದಿದ್ದಾರೆ.

ಈರುಳ್ಳಿಯಲ್ಲಿ ಕಣ್ಣಲ್ಲಿ ನೀರು ಬರಿಸುವ ಪ್ರೋಟಿನ್‌ ಇರುತ್ತೆ. ಈ ಪ್ರೋಟಿನ್‌ ನಿಂದ ಕಣ್ಣಲ್ಲಿ ನೀರು ಬರುವುದು ಮತ್ತು ಕಣ್ಣು ಉರಿಯುವುದು ಆಗುತ್ತದೆ ಆದರೆ ವಿಜ್ಞಾನಿಗಳ ಹೊಸ ಸಂಶೋಧನೆಯಲ್ಲಿ ಕಣ್ಣಿರು ಬರುವುದಿಲ್ಲ. ಕಣ್ಣಿರು ಬರದಿರುವುದಷ್ಟೇ ಅಲ್ಲ ಈ ಈರುಳ್ಳಿಯಲ್ಲಿ ಹೃದಯ ಸಂಬಂಧಿ ಕಾಯಿಲೆ ಕಡಿಮೆಯಾಗುತ್ತವೆ ಮತ್ತು ದೇಹದ ಭಾರ ನಿಂತ್ರಣ ಮಾಡುತ್ತದೆ.

ಸಂಶೋಧಕರಾದ ಇಡಿ ಮತ್ತು ಇವರ ಸಹದ್ಯೋಗಳ ಸಂಶೋಧನೆಯ ಪ್ರಕಾರ ಈರುಳ್ಳಿಯಲ್ಲಿ ಕಣ್ಣಲ್ಲಿ ನೀರು ಬರುವುದಕ್ಕೆ ಒಂದು ಕೆಮಿಕಲ್‌ ಕಾರಣವಂತೆ. ಈ ತಂಡ ಈರುಳ್ಳಿ ಕತ್ತರಿಸಿದಾಗ ಕಣ್ಣಿರು ಬರದಿರುವಂತೆ ಈರುಳ್ಳಿ ಕಂಡು ಹಿಡಿದಿದ್ದಾರೆ

ಈ ಈರುಳ್ಳಿ ಭಾರತಕ್ಕೆ ಬರಬಹುದು. ಇದು ಬಂದರೆ ಅಡುಗೆ ಮಾಡುವಾಗ ಅಳುವುದು ನಿಲ್ಲುತ್ತದೆ.
ಆದರೆ ಈರುಳ್ಳಿ ಕತ್ತರಿಸಿದರೆ ನೀರು ಬರದೇ ಇರಬಹುದು , ಆದರೆ ಈರುಳ್ಳಿ ಬೆಲೆ ಗಗನಕ್ಕೇರುವುದರಿಂದ ಈರುಳ್ಳಿ ಬೆಲೆ ನೋಡಿದ ತಕ್ಷಣವೇ ಕಣ್ಣಲ್ಲಿ ನೀರು ಬರುತ್ತವೆ.

ವೆಬ್ದುನಿಯಾವನ್ನು ಓದಿ