ಉದ್ಯೋಗ ಬದಲಾದಲ್ಲಿ ಪಿಎಫ್‌ ಸಂಖ್ಯೆ ಬದಲಾಗೋದಿಲ್ಲ

ಸೋಮವಾರ, 10 ಫೆಬ್ರವರಿ 2014 (17:10 IST)
PR
ನವದೆಹಲಿ: ಈಗ ಉದ್ಯೋಗಿಗಳು ಉದ್ಯೋಗ ಬದಲಾಯಿಸಿದಲ್ಲಿ ಪಿಎಫ್‌ ಸಂಖ್ಯೆ ಬದಲಿಸುವ ಅವಶ್ಯಕತೆಯಿಲ್ಲ ಎಂದು ಕೇಂದ್ರ ಕಾರ್ಮಿಕ ಸಚಿವಾಲಯ ಈ ನಿರ್ಣಯ ಕೈಗೊಂಡಿದೆ.

ನೌಕರರ ಭವಿಷ್ಯ ನಿಧಿ ಸಂಘಟನೆಗೆ ನೌಕರರಿಗೆ ಸ್ಥಿರ ಪಿಎಫ್‌ ನಂಬರ ಕೊಡುವಂತೆ ಕೇಂದ್ರ ಕಾರ್ಮಿಕ ಇಲಾಖೆ ತಿಳಿಸಿದೆ. ನೀವು ಒಂದು ಕಂಪೆನಿಯಿಂದ ಇನ್ನೊಂದು ಕಂಪೆನಿಗೆ ವರ್ಗಾವಣೆಯಾದರೆ ನಿಮ್ಮ ಪಿಎಫ್‌‌ ಖಾತೆ ಬದಲಾಯಿಸುವ ಗೋಜು ಇನ್ನಿಲ್ಲ . ಹಳೆಯ ಪಿಎಫ್‌ ಖಾತೆಯ ನಂಬರ್‌ ನೀಡಿದರೆ ಸಾಕು ಎಂದು ಕೇಂದ್ರ ಕಾರ್ಮಿಕ ಇಲಾಖೆ ತಿಳಿಸಿದೆ

ಸೆಂಟ್ರಲ್‌ ಬೋರ್ಡ್ ಆಫ್‌ ಟ್ರಸ್ಟೀಜ್‌ (ಸಿಬಿಟಿ) ಸಭೆಯಲ್ಲಿ ಕೇಂದ್ರ ಕಾರ್ಮಿಕ ಸಚಿವರಾದ ಗೌರಿ ಕುಮಾರ್ ಈ ಹೊಸ ನಿರ್ದೇಶನ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪಿಎಫ್‌ ಅಧಿಕಾರಿಗಳ ಹೇಳಿಕೆಯ ಪ್ರಕಾರ 2014-15 ರಲ್ಲಿ ಈ ಹೊಸ ನಿಯಮ ಜಾರಿಗೆ ತರುವುದು ಸುಲಭವಾಗಿದೆ. ಏಕೆಂದರೆ ಇಪಿಎಫ್‌‌ನ ಎಲ್ಲಾ 123 ಫೀಲ್ಡ್‌ ಕಾರ್ಯಾಲಯದಲ್ಲಿ ಎಲ್ಲ ದಾಖಲೆಗಳು ಡಿಜಿಟಲ್‌ನಲ್ಲಿ ಪರಿವರ್ತಿಸಲಾಗಿದೆ. ಇವೆಲ್ಲವನ್ನು ಒಂದು ಸೆಂಟ್ರಲ್‌ ಸರ್ವರ್‌ಗೆ ಜೋಡಿಸಬೇಕಾಗಿದೆ ಅಷ್ಟೆ ಮತ್ತು ಆನ್‌ಲೈನ್‌ ಪಿಎಫ್‌ ವರ್ಗಾವಣೆಯ ಕೆಲವೇ ದಿನಗಳ ಹಿಂದೆ ಪ್ರಾರಂಭವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ