ಎಲ್‌ಪಿಜಿಗೆ ಆಧಾರ್ ಕಾರ್ಡ್ ಬೇಕಾಗಿಲ್ಲ

ಶನಿವಾರ, 2 ನವೆಂಬರ್ 2013 (16:39 IST)
PR
ಇಲ್ಲಿಯವರೆಗೆ ಎಲ್‌ಪಿಜಿ ಬೇಕಾದರೆ ಆಧಾರ್‌ ಕಾರ್ಡ್ ಬೇಕಾಗುತ್ತಿತ್ತು. ಇದರಿಂದ ಆಧಾರ ಕಾರ್ಡ್ ಇಲ್ಲದವರಿಗೆ ತೋಂದರೆ ಆಗುತ್ತಿತ್ತು. ಆದರೆ ಇನ್ನುಮುಂದೆ ಆಧಾರ ಕಾರ್ಡ್ ಇಲ್ಲದಿದ್ದರೂ ಕೂಡ ಎಲ್‌ಪಿಜಿ ಸಿಗುತ್ತದೆ ಎಂದು ತೈಲ ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆಂದು ತೈಲ ನಿಗಮದ ಕಾರ‌್ಯಕಾರಿ ನಿರ್ದೇಶಕ ಆಂದ್ರಜಿತ್ ಬೋಸ್ ಹೇಳಿದ್ದಾರೆ.

ಆಧಾರ್ ಕಾರ್ಡ್ ಇಲ್ಲದಿದ್ದವರ ಅಡುಗೆ ಅನಿಲ ಸಂಪರ್ಕವನ್ನು ಇಂದಿನಿಂದ ಕಡಿತಗೊಳಿಸಲಾಗುತ್ತಿದೆ ಎಂಬುದು ಸತ್ಯವಲ್ಲ ಎಂದು ಬೋಸ್‌ ತಿಳಿಸಿದ್ದಾರೆ.

ಆದರೆ ಈ ಸೌಲಭ್ಯ ಬಹಳ ಕಾಲ ಇರುವುದಿಲ್ಲ. ಇದು ಕೇವಲ ಮೂರು ತಿಂಗಳು ಮಾತ್ರ ಇರಲಿದೆ.

ವೆಬ್ದುನಿಯಾವನ್ನು ಓದಿ