ಎಸ್‌ಬಿಐ:25ಸಾವಿರ ಉದ್ಯೋಗಿಗಳ ನೇಮಕ

ಸೋಮವಾರ, 17 ನವೆಂಬರ್ 2008 (11:05 IST)
ಜಾಗತಿಕ ಆರ್ಥಿಕ ಕುಸಿತದಿಂದಾಗಿ ಬಹುತೇಕ ಬ್ಯಾಂಕ್‌ಗಳು ನೌಕರರನ್ನು ವಜಾಗೊಳಿಸುತ್ತಿರುವ ಸಂದರ್ಭದಲ್ಲಿ, ದೇಶದ ನಂಬರ್ ಒನ್ ಬ್ಯಾಂಕ್‌ ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ 25 ಸಾವಿರ ಉದ್ಯೋಗಿಗಳನ್ನು ನೇಮಕ ಮಾಡಲು ನಿರ್ಧರಿಸಿದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.

ಕಳೆದ ಹಲವು ವರ್ಷಗಳಿಂದ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಾಗಿಲ್ಲ. ಪ್ರಸಕ್ತ ವರ್ಷ 20 ಸಾವಿರ ಕ್ಲರ್ಕ್‌ ಹುದ್ದೆ ಹಾಗೂ 5 ಸಾವಿರ ಸೂಪರ್‌ವೈಸರ್ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಬ್ಯಾಂಕ್‌ ಮುಖ್ಯಸ್ಥ ಒ.ಪಿ.ಭಟ್ ತಿಳಿಸಿದ್ದಾರೆ.

ಜಾಗತಿಕ ಆರ್ಥಿಕ ಕುಸಿತದಿಂದಾಗಿ ಅನೇಕ ಹಣಕಾಸು ಸಂಸ್ಥೆಗಳು ವೆಚ್ಚವನ್ನು ಕಡಿತಗೊಳಿಸಲು ಅನೇಕ ನೌಕರರನ್ನು ವಜಾ ಮಾಡುತ್ತಿರುವ ಸಮಯದಲ್ಲಿ ಎಸ್‌ಬಿಐ 25 ಸಾವಿರ ಹುದ್ದೆಗಳಿಗೆ ನೇಮೆಕ ಮಾಡಿಕೊಳ್ಳುತ್ತಿರುವುದು ಬ್ಯಾಂಕಿಂಗ್ ವಲಯದಲ್ಲಿ ಅಚ್ಚರಿ ಮೂಡಿಸಿದೆ.

ಜಗತ್ತಿನ ಬೃಹತ್ ಬ್ಯಾಂಕಿಂಗ್ ಸಂಸ್ಥೆಯಾದ ಸಿಟಿ ಗ್ರುಪ್ 10 ಸಾವಿರ ನೌಕರರನ್ನು ವಜಾಗೊಳಿಸಲು ಆದೇಶ ಹೊರಡಿಸಿದಲ್ಲದೇ ಕ್ರೆಡಿಟ್ ಕಾರ್ಡ್‌ಗಳ ಮೇಲಿನ ಬಡ್ಡಿದರವನ್ನು ಹೆಚ್ಚಳವಾಗಿಸಿದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ