ಏಷ್ಯಾದಲ್ಲಿ ವಹಿವಾಟು ವಿಸ್ತರಣೆಯತ್ತ ಓಪನ್ ಬ್ರಾವೋ

ಶನಿವಾರ, 31 ಮಾರ್ಚ್ 2012 (16:21 IST)
PTI
ಇಂಟರ್‌ನೆಟ್ ಆಧಾರಿತ ಮುಕ್ತ ಉದ್ಯಮ ಸಾಫ್ಟ್‌ವೇರ್ ಸೇವಾ ಸೌಲಭ್ಯ ಒದಗಿಸುವ ಓಪನ್ ಬ್ರಾವೊ, ಭಾರತ ಮತ್ತು ಏಷ್ಯಾ ಪೆಸಿಫಿಕ್ ವಲಯದಲ್ಲಿನ ಉದ್ಯಮ ಸಾಫ್ಟ್‌ವೇರ್ ಮಾರುಕಟ್ಟೆಯಲ್ಲಿ ತನ್ನ ಸೇವೆ ವಿಸ್ತರಿಸಲು ಮುಂದಾಗಿದೆ.

ಈ ಉದ್ಯಮ ಸಾಫ್ಟ್‌ವೇರ್ ಮಾರುಕಟ್ಟೆಯಲ್ಲಿ ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳ ಪಾಲು ಗಮನಾರ್ಹವಾಗಿ ಇದೆ. ಓಪನ್ ಬ್ರಾವೊ, ಪ್ರತಿಯೊಂದು ಉದ್ಯಮ ಸಂಸ್ಥೆಗಳ ಅಗತ್ಯಗಳಿಗೆ ಅನುಗುಣವಾದ, ಸ್ಥಳೀಯ ಸಮಸ್ಯೆಗಳಿಗೆ ಸೂಕ್ತ ಸೇವೆ ಒದಗಿಸಿ ಉತ್ಪಾದನೆ ಹೆಚ್ಚಿಸಲು ನೆರವಾಗುತ್ತದೆ ಎಂದು ಸಂಸ್ಥೆಯ ಮಾರಾಟ ವಿಭಾಗದ ಉಪಾಧ್ಯಕ್ಷ ಆಂಡ್ರೂ ಬಾರ್ಟೊಲಿ, ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿಶ್ವದಾದ್ಯಂತ 6 ಸಾವಿರಕ್ಕೂ ಹೆಚ್ಚು ಉದ್ದಿಮೆ ಸಮೂಹಗಳು ಸಂಸ್ಥೆಯ ಸೇವೆ ಪಡೆಯುತ್ತಿವೆ. ಬಾಡಿಗೆ ಆಧಾರಿತ ಸಾಫ್ಟ್‌ವೇರ್ ಸೇವೆಯನ್ನೂ ಸಂಸ್ಥೆ ಒದಗಿಸುತ್ತಿದೆ.ಭಾರತದಲ್ಲಿ ಕಡಿಮೆ ವೆಚ್ಚಕ್ಕೆ ಹೆಚ್ಚು ಗಮನ ನೀಡಲಾಗುತ್ತಿದ್ದು, ಮಧ್ಯಮ ಗಾತ್ರದ ಉದ್ದಿಮೆಗಳ ಅಗತ್ಯಗಳನ್ನು ಓಪನ್ ಬ್ರಾವೊ ಒದಗಿಸುತ್ತದೆ ಎಂದು ಬ್ರಾವೊದ ಪಾಲುದಾರ ಸಂಸ್ಥೆ ಸಿಸ್‌ಫೋರ್ ಟೆಕ್ನಾಲಜೀಸ್‌ನ ಸ್ಥಾಪಕ ಮ್ಯಾಥ್ಯೂ ಜಾರ್ಜ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ