ಕಲ್ಲಿದ್ದಲು ದುಬಾರಿ: ಗ್ರಾಹಕರೇ ಮತ್ತೆ ಹೆಚ್ಚಳವಾಗಲಿದೆ ವಿದ್ಯುತ್‌ ಬಿಲ್‌‌

ಬುಧವಾರ, 18 ಡಿಸೆಂಬರ್ 2013 (15:12 IST)
PR
ಕೊಲ್ಕತ್ತಾದ ಕೋಲ್ ಇಂಡಿಯಾದ ರಿಯಾಯತಿ ವೆಸ್ಟರ್ನ್ ಕೋಲ್‌ಫೀಲ್ಡ್‌ ತನ್ನ ಎಲ್ಲಾ ವಿಭಾಗದ ಕಲ್ಲಿದ್ದಲು ದರದಲ್ಲಿ ಶೇ. 10 ರಷ್ಟು ಹೆಚ್ಚಳ ಮಾಡಿದೆ. ಇದರಿಂದ ಬಹಳಷ್ಟು ರಾಜ್ಯಗಳಲ್ಲಿ ವಿದ್ಯುತ್‌ ಬೆಲೆ ಹೆಚ್ಚಳವಾಗಲಿದೆ. ಮಹಾರಾಷ್ಟ್ರದಲ್ಲಿ ಸಿಮೆಂಟ್‌ ಮತ್ತು ಸ್ಟೀಲ್ ವಸ್ತುಗಳ ಬೆಲೆ ಕೂಡ ಹೆಚ್ಚಳವಾಗಲಿದೆ.

ಕಲ್ಲಿದ್ದಲು ಬೆಲೆಯಲ್ಲಿ ಹೆಚ್ಚಳವಾದ ಬಳಿಕ ಮಹಾರಾಷ್ಟ್ರ, ಮಧ್ಯ ಪ್ರದೇಶ, ಕರ್ನಾಟಕ , ಉತ್ತರ ಪ್ರದೇಶ ಮತ್ತು ಗುಜರಾತ್ ರಾಜ್ಯಗಳಲ್ಲಿ ವಿದ್ಯುತ್‌ ದರದಲ್ಲಿ ಹೆಚ್ಚಳವಾಗುವ ಸಾದ್ಯತೆ ಇದೆ . ಇದರ ಜೊತೆಗೆ ಅಲ್ಟ್ರಾಟೆಕ್‌‌ನಂತ ಸಿಮೆಂಟ್ ಕೈಗಾರಿಕೆಗಳ ಉತ್ಪಾದನಾ ವೆಚ್ಚ ಹೆಚ್ಚಳವಾಗಲಿದೆ.

ಕಲ್ಲಿದ್ದಲಿನ ಬೆಲೆ ಹೆಚ್ಚಳ ಮಾಡುವುದು ಅನಿವಾರ್ಯವಾಗಿದೆ ಎಂದು ವೆಸ್ಟರ್ನ್ ಕೋಲ್‌ಫೀಲ್ಡ್‌ ಮುಖ್ಯಸ್ಥರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ