ಕಾರುಗಳ ಮಾರಾಟದಲ್ಲಿ ಕುಸಿತ: ಉದ್ಯೋಗಿಗಳ ವಜಾಕ್ಕೆ ಚಿಂತನೆ

ಮಂಗಳವಾರ, 13 ಆಗಸ್ಟ್ 2013 (14:20 IST)
PTI
ದೇಶಿಯ ಕಾರು ಮಾರುಕಟ್ಟೆ ಸತತ ಒಂಬತ್ತನೇ ತಿಂಗಳಿನಲ್ಲೂ ಕುಸಿತ ಕಂಡಿದೆ. ಲಘು ಮತ್ತು ಮಧ್ಯಮ ವಾಣಿಜ್ಯ ವಾಹನಗಳ ಮಾರಾಟದಲ್ಲಿ ಶೇ.7.4 ರಷ್ಟು ಇಳಿಕೆಯಾಗಿದೆ ಎಂದು ಸಿಯಾಮ್ ಪ್ರಕಟಿಸಿದೆ.

ಸೂಸೈಟಿ ಆಫ್ ಇಂಡಿಯನ್ ಅಟೋಮೊಬೈಲ್ ಮ್ಯಾನುಫ್ಯಾಕ್ಚುರರ್ಸ್ (ಸಿಯಾಮ್) ಇತ್ತೀಚಿನ ಅಂಕಿ ಅಂಶಗಳ ಪ್ರಕಾರ, ಜುಲೈ ತಿಂಗಳಲ್ಲಿ 1,31,163 ದೇಶಿಯ ಪ್ರಯಾಣಿಕ ಕಾರುಗಳ ಮಾರಾಟ ಮಾಡಲಾಗಿದೆ. ಆದರೆ, ಹಿಂದಿನ ವರ್ಷ ಇದೇ ಅವಧಿಯಲ್ಲಿ 1,41,646 ಕಾರುಗಳನ್ನು ಮಾರಾಟ ಮಾಡಲಾಗಿತ್ತು.

ಒಟ್ಟು ವಾಣಿಜ್ಯ ವಾಹನಗಳ ಮಾರಾಟದಲ್ಲಿ ಶೇ.14.93 ರಷ್ಟು ಕುಸಿತವಾಗಿ 55.391 ವಾಹನಗಳಿಗೆ ಕುಸಿದಿದೆ. ಕಳೆದ ವರ್ಷದ ಅವಧಿಯಲ್ಲಿ 65,008 ವಾಹನಗಳನ್ನು ಮಾರಾಟ ಮಾಡಲಾಗಿತ್ತು. ಭಾರಿ ಮತ್ತು ಮಧ್ಯಮ ವರ್ಗದ ವಾಣಿಜ್ಯ ವಾಹನಗಳ ಮಾರಾಟದಲ್ಲಿ ಶೇ.19.88 ರಷ್ಟು ಕುಸಿತ ಕಂಡಿದೆ.

ವಾಹನಗಳ ಮಾರಾಟದಲ್ಲಿ ಕುಸಿತವಾಗಿದ್ದರಿಂದ ಕಂಪೆನಿಗಳು ತಾತ್ಕಾಲಿಕ ಮತ್ತು ದಿನಗೂಲಿ ನೌಕರರನ್ನು ಕೆಲಸದಿಂದ ವಜಾಗೊಳಿಸಲು ಚಿಂತನೆ ನಡೆಸಿವೆ ಎಂದು ಸಿಯಾಮ್ ಪ್ರಧಾನ ನಿರ್ದೇಶಕ ವಿಷ್ಣು ಮಾಥುರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ