ಕುಸಿದ ಈರುಳ್ಳಿ ಬೆಲೆ: ಗ್ರಾಹಕರಿಗೆ ಸಂತಸ, ರೈತರಿಗೆ ಮಾತ್ರ ಸಂಕಟ

ಶುಕ್ರವಾರ, 20 ಡಿಸೆಂಬರ್ 2013 (12:25 IST)
PR
PR
ಬೆಂಗಳೂರು: ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ದಿಢೀರ್ ಬೆಲೆ ಕುಸಿದಿರುವುದು ಈರುಳ್ಳಿ ಬೆಳೆಯುವ ರೈತರ ಕಣ್ಣಲ್ಲಿ ನೀರು ತರಿಸಿದೆ. ಬೇರೆ ರಾಷ್ಟ್ರಗಳಿಗೆ ಈರುಳ್ಳಿ ರಫ್ತಾಗುವುದು ರದ್ದಾದ ಹಿನ್ನೆಲೆಯೆಲ್ಲಿ , ಕೆಜಿಗೆ 25 ರೂ. ಇದ್ದ ಈರುಳ್ಳಿ ಈಗ 10-12ರೂ.ಗೆ ಕುಸಿದಿದೆ. ಬೇರೆ ಜಿಲ್ಲೆಗಳಿಂದ ತಂದ ಈರುಳ್ಳಿ ಗಾಡಿಗಳು ಆರ್‌ಎಂಸಿ ಯಾರ್ಡ್‌ನಲ್ಲಿ ಹಾಗೇ ನಿಂತಿವೆ. ಬೆಲೆ ಕುಸಿತದಿಂದ ಈರುಳ್ಳಿ ಬೆಳೆಗಾರರು ಕಂಗೆಟ್ಟಿದ್ದಾರೆ. ಬೆಳ್ಳಬೆಳಗ್ಗೆಯೇ ಲೋಡ್ ಗಟ್ಟಲೆ ಈರುಳ್ಳಿ ತಂದ ಬೆಳೆಗಾರರು ಲಾರಿಗಳನ್ನು ಹಾಗೇ ನಿಲ್ಲಿಸಿದ್ದಾರೆ.

ಈರುಳ್ಳಿ ಬೆಲೆ ಕೇಳಿ ಕಂಗಾಲಾಗಿ ಆರ್‌ಎಂಸಿ ಯಾರ್ಡ್‌ಗಳಿಗೆ ಮಾರಾಟ ಮಾಡದೇ ಲಾರಿಗಳನ್ನು ಹಾಗೇ ನಿಲ್ಲಿಸಿದ್ದಾರೆ. ಈರುಳ್ಳಿ ಬೆಲೆ ಕಡಿಮೆಯಾಗಿರುವುದು ಗ್ರಾಹಕರಿಗೆ ಸಂತೋಷ ತಂದಿದ್ದರೂ, ಬೆಳೆಗಾರರ ಕಣ್ಣಲ್ಲಿ ಮಾತ್ರ ನೀರು ತರಿಸಿದೆ.

ವೆಬ್ದುನಿಯಾವನ್ನು ಓದಿ