ಕೃಷಿ ಕ್ಷೇತ್ರದ ಉತ್ಪಾದನೆ ಬೃಹತ್‌ ಹೆಚ್ಚಳ ಸಾಧ್ಯತೆ:ಅಸೋಚಾಮ್

ಮಂಗಳವಾರ, 8 ಅಕ್ಟೋಬರ್ 2013 (13:48 IST)
PR
ಉತ್ತಮ ಮುಂಗಾರು ಕಾರಣದಿಂದಾಗಿ ಈ ಬಾರಿ ಕೃಷಿ ಕ್ಷೇತ್ರದ ಉತ್ಪಾದನೆ ಬೃಹತ್‌ ಪ್ರಮಾಣದ್ದಾಗಿರಲಿದೆ ಎಂದು ಅಂದಾಜು ಮಾಡಲಾಗಿದ್ದು, ದೇಶದ ಆರ್ಥಿಕ ಪ್ರಗತಿ ಗತಿಯೂ ಪ್ರಸಕ್ತ ಹಣ ಕಾಸು ವರ್ಷದಲ್ಲಿ ಶೇ 5.8ರ ಮಟ್ಟಕ್ಕೇ ರುವ ನಿರೀಕ್ಷೆ ಇದೆ ಎಂದು ವಾಣಿಜ್ಯೋ ದ್ಯಮ ಮಹಾಸಂಸ್ಥೆ ‘ಅಸೋಚಾಂ’ ಭವಿಷ್ಯ ನುಡಿದಿದೆ.

ಕೃಷಿ ಕ್ಷೇತ್ರದಲ್ಲಿನ ಆರೋಗ್ಯಕಾರಿ ಚಟುವಟಿಕೆ ಹಿನ್ನೆಲೆಯಲ್ಲಿ ಈ ಬಾರಿ ಗ್ರಾಮೀಣ ಭಾಗದಿಂದ ಮಾರುಕಟ್ಟೆಗೆ ಹೆಚ್ಚಿನ ಹಣ ಹರಿದು ಬರುವ ಸಾಧ್ಯತೆ ಇದೆ. ಇದು ಪರಿಕರ ತಯಾರಿಕೆ ಕ್ಷೇತ್ರ ಮತ್ತು ವಿವಿಧ ಸೇವಾ ಕ್ಷೇತ್ರದಲ್ಲಿನ ಚಟು ವಟಿಕೆ ಚುರುಕುಗೊಳ್ಳಲು ಕಾರಣವಾಗಲಿದೆ. ಹಾಗಾಗಿ, 2012-13ರಲ್ಲಿ ಶೇ 5 ರಷ್ಟಿದ್ದ ‘ಒಟ್ಟಾರೆ ಆಂತರಿಕ ಉತ್ಪಾದನೆ’ (ಜಿಡಿಪಿ) ಪ್ರಮಾಣ, ಈ ಬಾರಿ ಶೇ 5.5 ರಿಂದ ಶೇ 6ರವರೆಗೂ ಏರಿಕೆ ಕಾಣುವ ನಿರೀಕ್ಷೆ ಇದೆ ಎಂದು ‘ಅಸೋಚಾಂ’ನ ಇತ್ತೀಚಿನ ಅಧ್ಯಯನ ವರದಿ ತಿಳಿಸಿದೆ.

ಕೃಷಿ ಕ್ಷೇತ್ರದ ಉತ್ಪಾದನೆ ಹೆಚ್ಚಿದರೆ, ಇನ್ನೊಂದೆಡೆ ಅದು ಕೃಷಿ ಕ್ಷೇತ್ರವನ್ನು ಅವಲಂಬಿಸಿದ ಕೈಗಾರಿಕೆಗಳ ಪ್ರಗತಿಗೂ ಮುನ್ನುಡಿ ಬರೆಯಲಿದೆ. ಈ ಅಂಶಗಳೆ ಲ್ಲವೂ ದೇಶದ ‘ಒಟ್ಟಾರೆ ಆಂತರಿಕ ಉತ್ಪಾದನೆ’(ಜಿಡಿಪಿ) ಹೆಚ್ಚಳಕ್ಕೆ ಕಾರಣ ವಾಗಲಿವೆ ಎಂದು ‘ಅಸೋಚಾಂ’ನ ಪ್ರಧಾನ ಕಾರ್ಯದರ್ಶಿ ಡಿ.ಎಸ್‌. ರಾವತ್‌ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ