ಕೊರತೆ ಬಜೆಟ್‌‌ ನೀಗಿಸಲು ಸಬ್ಸಿಡಿ ಕಡಿತ ಅನಿವಾರ್ಯ : ರಂಗರಾಜನ್‌

ಶುಕ್ರವಾರ, 27 ಡಿಸೆಂಬರ್ 2013 (16:17 IST)
PR
ಚೆನ್ನೈ: ಕೊರತೆ ಬಜೆಟ್‌ ಸರಿಪಡಿಸಲು ಸಬ್ಸಿಡಿ ನೀಡುವುದು ಕಡಿಮೆ ಮಾಡಬೇಕು ಎಂದು ಆರ್ಥೀಕ ಸಲಹಾ ಪರಿಷತ್‌ನ ಅದ್ಯಕ್ಷ ಸಿ ರಂಗರಾಜನ್‌ ತಿಳಿಸಿದ್ದಾರೆ.

ಕೊರತೆ ಬಜೆಟ್‌ ನೀಗಿಸಲು ಸರ್ಕಾರ ಸಬ್ಸಿಡಿ ನೀಡುವುದು ನಿಲ್ಲಿಸಬೇಕು ಎಂದು ಒಂದು ಸಮಾರಂಭಲ್ಲಿ ತಿಳಿಸಿದ್ದಾರೆ ಸಧ್ಯಕ್ಕೆ ಶೇ. 4.5 ರಷ್ಟು ಕೊರತೆ ಬಜೆಟ್‌ ಇದೆ. ಇದನ್ನು ಕಡಿಮೆಯಾಗಬೇಕೆಂದರೆ ಸಬ್ಸಿಡಿ ಕಡಿತಗೊಳಿಸಬೇಕು ಎಂದರು.

ಸರ್ಕಾರ ಜಿಡಿಪಿಯನ್ನು ಶೇ.4.8 ರಷ್ಟಿರಲು ಪ್ರಯತ್ನಿಸಬೇಕು ಆದರೆ ಸರ್ಕಾರ ಸಬ್ಸಿಡಿ ಕಡಿಮೆ ಮಾಡಿ ಇತರ ಕ್ಷೇತ್ರಗಳ ಅಬಿವೃದ್ದಿ ಮಾಡಬೇಕು ಎಂದು ರಂಗರಾಜನ್‌ ತಿಳಿಸಿದ್ದಾರೆ . ಸಬ್ಸಿಡಿ ಕಡಿಮೆ ಮಾಡುವ ಮೂಲಕ ದೇಶದ ಖಜಾನೆಯಲ್ಲಿ ಹೆಚ್ಚಿನ ಹಣ ಸಿಗುತ್ತದೆ ಎಂದು ರಂಗರಾಜನ್‌ ತಿಳಿಸಿದ್ದಾರೆ


ವೆಬ್ದುನಿಯಾವನ್ನು ಓದಿ