ಕ್ರೆಡಿಟ್ ಕಾರ್ಡ್ ಶುಲ್ಕದ ಮೇಲೆ ಬ್ಯಾಂಕುಗಳ ವಿರುದ್ಧ 3763 ದೂರು

ಶನಿವಾರ, 14 ಡಿಸೆಂಬರ್ 2013 (15:24 IST)
PR
ಕ್ರೆಡಿಟ್‌ ಕಾರ್ಡ್‌ ಶುಲ್ಕಕ್ಕೆ ಸಂಬಂಧಿಸಿದಂತೆ ಒಟ್ಟು 3763 ದೂರುಗಳು ಬ್ಯಾಂಕ್‌ಗಳ ವಿರುದ್ದ ಬಂದಿವೆ ಎಂದು ಲೋಕಸಭೆಯಲ್ಲಿ ಸಂಸದರ ಪ್ರಶ್ನೆಗಳಿಗೆ ಉತ್ತರಿಸುವ ಸಂದರ್ಭದಲ್ಲಿ ವಿತ್ತ ರಾಜ್ಯ ಮಂತ್ರಿ ನಾರಾಯಣ ಮೀನಾ ಮಾಹಿತಿ ನೀಡಿದ್ದಾರೆ.

ಕ್ರೆಡಿಟ್‌‌ ಕಾರ್ಡ್‌ಗೆ ಸಂಬಂಧಿಸಿದ ಶುಲ್ಕ , ಕೆಟ್ಟಸೇವೆ, ಅವಧಿ ಮುಗಿದ ಮೇಲಿನ ಶುಲ್ಕ ಮತ್ತು ಕಿರಿಕಿರಿ ನೀಡುವ ಫೋನ್‌ಕರೆಗಳಿಗೆ ಸಂಬಂಧಿಸಿದಂತೆ ಒಟ್ಟು 3763 ದೂರುಗಳು ಬಂದಿವೆ ಎಂದು ಸಚಿವರು ತಿಳಿಸಿದ್ದಾರೆ.

2012-13 ರಲ್ಲಿ 7744 ಮತ್ತು 2011-12ರಲ್ಲಿ 5146 ಕ್ರೆಡಿಟ್‌ ಕಾರ್ಡ್‌ಗೆ ಸಂಬಂಧಿಸಿದಂತೆ ದೂರುಗಳು ಬಂದಿವೆ ಎಂದು ಸಚಿವರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ