ಕ್ರ್ಯಾಶ್ ಟೆಸ್ಟ್‌ನಲ್ಲಿ ಟಾಟಾ ನ್ಯಾನೋ, ಹೊಂಡೈ ಐ10 ಫೇಲ್

ಶುಕ್ರವಾರ, 31 ಜನವರಿ 2014 (19:24 IST)
PR
PR
ನವದೆಹಲಿ: ಭಾರತದಲ್ಲಿ ಕೆಲವು ಕಾರುಗಳು ಭರದಿಂದ ಮಾರಾಟವಾಗುತ್ತಿವೆ. ಆದರೆ ಜಾಗತಿಕ ಕಾರು ಸುರಕ್ಷತೆ ಕಾವಲುಸಮಿತಿ ನಿರ್ವಹಿಸಿದ ಕ್ರ್ಯಾಶ್ ಟೆಸ್ಟ್‌ನಲ್ಲಿ ವಿಫಲವಾಗಿವೆ. ಭಾರತದ ಮಾರುಕಟ್ಟೆಯಲ್ಲಿ ಕಳೆದ ವರ್ಷ ಜನಪ್ರಿಯವಾದ ಟಾಟಾ ನ್ಯಾನೋ ಮತ್ತು ಹೊಂಡೈ ಐ10 ಸೇರಿದಂತೆ ಎಲ್ಲ ಐದು ಜನಪ್ರಿಯ ಸಣ್ಣ ಕಾರುಗಳು ಕ್ರಾಶ್ ಟೆಸ್ಟ್‌ನಲ್ಲಿ ವಿಫಲವಾಗಿವೆ. ಲಂಡನ್ ಕಾರ್ ಸುರಕ್ಷತೆ ಕಾವಲುಸಮಿತಿ ಇವುಗಳನ್ನು ನಡೆಸಿದೆ. ಪರೀಕ್ಷೆ ಮಾಡಿದ ಕಾರುಗಳಲ್ಲಿ ಟಾಟಾ ನ್ಯಾನೋ, ಮಾರುತಿ ಸುಜುಕಿ ಆಲ್ಟೋ 800, ಹೊಂಡೈ ಐ10, ಫೋರ್ಡ್ ಫಿಗೋ ಮತ್ತು ವೋಲ್ಕ್ಸ್‌ವಾಗನ್ ಪೋಲೋ ಸೇರಿವೆ.

ಇವೆಲ್ಲ ಮೇಡ್ ಇನ್ ಇಂಡಿಯಾ ಮಾದರಿಗಳಾಗಿದ್ದು, ಪ್ರವೇಶ ಮಟ್ಟದ ಕಾರಿನ ರೂಪವನ್ನು ಪರೀಕ್ಷೆಗೆ ಹಾಜರುಪಡಿಸಲಾಗಿತ್ತು. ಒಂದೇ ತಯಾರಿಕೆಯ ಎರಡು ಹೋಲಿಕೆಯ ಕಾರುಗಳನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಭಾರತದ ಷೋರೂಂಗಳಿಂದ ಜಾಗತಿಕ ಎನ್‌ಸಿಎಪಿ ಖರೀದಿಸಿದ್ದು, ಪರೀಕ್ಷೆಗಾಗಿ ಜರ್ಮನಿಗೆ ಸಾಗಿಸಲಾಯಿತು. ಗಂಟೆಗೆ 56 ಕಿಮೀ ಓಡುವ ಮತ್ತು ಇನ್ನೊಂದು 64 ಕಿಮೀ ಓಡುವ ಕಾರುಗಳ ಪರೀಕ್ಷೆ ನಡೆಸಲಾಯಿತು.

ಪರೀಕ್ಷೆ ಮಾಡಿದ ಐದು ಕಾರುಗಳಲ್ಲಿ ಫಿಗೋ ಮತ್ತು ಪೋಲೋ ಉತ್ತಮ ರಚನಾತ್ಮಕ ಬಿಗಿತ ಮತ್ತು ಸುರಕ್ಷತೆಯ ಕ್ಯಾಬಿನ್ ಹೊಂದಿದ್ದವು. ಆದರೆ ಸಣ್ಣ ಕಾರುಗಳು ಕಳಪೆಯಾಗಿ ಕಾರ್ಯನಿರ್ವಹಿಸಿವೆ. ಆಶ್ಚರ್ಯಕರ ಸಂಗತಿಯೆಂದರೆ ಭಾರತದ ಮಾರುಕಟ್ಟೆಗೆ ಬಿಡುಗಡೆಯಾದ ಹೊಂಡೈ ಐ10 ಕೂಡ ಕಳಪೆಯಾಗಿ ಕಾರ್ಯನಿರ್ವಹಿಸಿವೆ. ಅಂದರೆ ಭಾರತದ ಖರೀದಿದಾರರಿಗೆ ಭಿನ್ನವಾಗಿ ಕಾರನ್ನು ತಯಾರಿಸಲಾಗಿದೆಯಾ ಎಂಬ ಪ್ರಶ್ನೆ ಉದ್ಭವಿಸಿದೆ.

ವೆಬ್ದುನಿಯಾವನ್ನು ಓದಿ