ಖಾಸಗಿ ಇಂಟರ್ನೆಟ್ ಬಳಕೆಗೂ ಪಾಕಿಸ್ತಾನ ಕಡಿವಾಣ!

ಮಂಗಳವಾರ, 30 ಆಗಸ್ಟ್ 2011 (12:28 IST)
ನೂತನ ತಂತ್ರಜ್ಞಾನಗಳನ್ನು ಬಳಸಿ, ವೈಯಕ್ತಿಕವಾಗಿ ಯಾರೂ ಇಂಟರ್‌ನೆಟ್ ಬಳಸದಂತೆ ತಡೆ ಹೇರಲು ಇಂಟರ್‌ನೆಟ್ ಸೇವಾದಾರ ಸಂಸ್ಥೆಗಳಿಗೆ ಪಾಕಿಸ್ತಾನ ದೂರಸಂಪರ್ಕ ಪ್ರಾಧಿಕಾರ (ಪಿಟಿಎ) ನಿರ್ದೇಶನ ನೀಡಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಅಂತರ್ಜಾಲ ಬಳಸುವ ಮೂಲಕ ಭಯೋತ್ಪಾದಕರು ಸಂಪರ್ಕ ಸಾಧಿಸುವುದರ ಮೇಲೆ ತಡೆಹೇರುವುದು ನಮ್ಮ ಉದ್ದೇಶವಾಗಿತ್ತಾದರೂ, ಎಲ್ಲಾ ಇಂಟರ್ನೆಟ್ ಖಾಸಗಿ ಸೇವೆಗಳ ಮೇಲೆ ಕಡಿವಾಣ ಹಾಕಿದರೆ ಮಾತ್ರ ಅದು ಸಾಧ್ಯ ಎಂದು ಪಿಟಿಎ ವಕ್ತಾರ ತಿಳಿಸಿದ್ದಾರೆ.

ನಕಲಿ ಹೆಸರುಗಳ ಮೂಲಕ ವಿಷಯ ಹಂಚಿಕೆ ಜಾಲಗಳು ಪಾಕಿಸ್ತಾನದೆಲ್ಲೆಡೆ ಹೇರಳವಾಗಿರುವುದರಿಂದ, ಕಳೆದ ಜೂನ್‌ನಿಂದ ಎಲ್ಲಾ ವೆಬ್‌ಸೈಟ್ ಸೇರಿದಂತೆ ಪ್ರಮುಖ ಸುದ್ದಿ ವೆಬ್‌ಸೈಟ್‌ಗಳ ಮೇಲೂ ನಿರ್ಬಂಧ ಹೇರಲಾಗಿದೆ.

ನಿರ್ಧಿಷ್ಟ ವೆಬ್‌ಸೈಟ್‌ಗಳ ಮೇಲೆ ಕಡಿವಾಣ ಹಾಕುವುದು ಅಸಾಧ್ಯವಾದರಿಂದ ಒಟ್ಟಾರೆ ವೆಬ್‌ಸೈಟ್‌, ಬ್ಲಾಗ್‌ಗಳ ಮೇಲೆ ನಿರ್ಬಂಧ ಹೇರಲು ಸೂಚಿಸಲಾಗಿದೆ.

ವೆಬ್ದುನಿಯಾವನ್ನು ಓದಿ