ಗಗನಕ್ಕೇರಿತು ಹಣ್ಣು, ತರಕಾರಿ ಬೆಲೆ: ಬಜೆಟ್‌ಗೆ ಬಿತ್ತು ಶೇ. 40 ಕತ್ತರಿ

ಭಾನುವಾರ, 1 ಡಿಸೆಂಬರ್ 2013 (15:00 IST)
PR
PR
ಭಾರತದಲ್ಲಿ ಹಣದುಬ್ಬರ ದಿನೇ ದಿನೇ ಗಗನಕ್ಕೇರುತ್ತಿದೆ. ಇದರಿಂದ ಗೃಹಬಳಕೆದಾರರು ತಮ್ಮ ಬಜೆಟ್‌ಗೆ ಕತ್ತರಿ ಹಾಕಬೇಕಾದ ಅನಿವಾರ್ಯತೆ ಉಂಟಾಗಿದೆ. ಅದಕ್ಕಾಗಿ ಅವರು ಪೌಷ್ಠಿಕ ಸಮೃದ್ದ ಆಹಾರ ಸೇವನೆಯನ್ನು ಶೇ.40ರಷ್ಟು ಕಡಿಮೆ ಮಾಡಿದ್ದಾರೆ. ಹಿಂದೆ ಸೇಬು ಮುಂತಾದ ಹಣ್ಣು, ಮೊಟ್ಟೆ ಮುಂತಾದ ಪ್ರಾಣಿಜನ್ಯ ಆಹಾರ ದಿನನಿತ್ಯ ಮನೆಯಲ್ಲಿ ತಂದಿಡುತ್ತಿದ್ದರು. ಈಗ ಸೇಬು ಕೈಗೆಟುಕದ ಗಗನಕುಸುಮವಾಗಿದೆ. ಮೊಟ್ಟೆ ಧಾರಣೆಯು ಏರುತ್ತಲೇ ಇದೆ. ಹೀಗಾಗಿ ಪೌಷ್ಠಿಕಾಂಶವುಳ್ಳ ಆಹಾರ ಸೇವನೆ ಕಡಿಮೆಯಾಗುತ್ತಲೇ ಇದೆ.

ವಾಣಿಜ್ಯ ಮತ್ತು ಕೈಗಾರಿಕೆ ಮಂಡಳಿ ಒಕ್ಕೂಟ(ಅಸೋಚಾಮ್) ನಡೆಸಿದ ಸಮೀಕ್ಷೆಯಲ್ಲಿ ಇದು ತಿಳಿದುಬಂದಿದೆ. ದೆಹಲಿ, ಮುಂಬೈ, ಅಹ್ಮದಾಬಾದ್, ಕೊಲ್ಕತ್ತಾ, ಚೆನ್ನೈ, ಹೈದರಾಬಾದ್, ಪುಣೆ ಮತ್ತು ಚಂದೀಗಢದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಗರಿಷ್ಠ ಪರಿಣಾಮದ ಅನುಭವವಾಗಿದೆ ಎಂದು ಅಸೋಚಾಮ್ ತಿಳಿಸಿದೆ.
ಮತ್ತಷ್ಟು ಮಾಹಿತಿ ಮುಂದಿನ ಪುಟದಲ್ಲಿ

PR
PR
ಹಣ್ಣುಗಳು, ತರಕಾರಿಗಳು ಮತ್ತು ಹಾಲಿನ ಚಿಲ್ಲರೆ ದರಗಳು ದಿನದಿನಕ್ಕೂ ಏರುತ್ತಲೇ ಇರುವುದರಿಂದ ಮಧ್ಯಮ ವರ್ಗದ ಕುಟುಂಬಗಳು ತಮ್ಮ ಖರ್ಚುವೆಚ್ಚಗಳಿಗೆ ಕಡಿವಾಣ ಹಾಕಿದ್ದಾರೆ. ಹೀಗೆ ಕಡಿವಾಣ ಹಾಕಿದವರಲ್ಲಿ ಮಧ್ಯಮವರ್ಗದ ಶೇ. 70ರಷ್ಟು ಜನರು ಸೇರಿದ್ದಾರೆ. ಸುಮಾರು 2000 ಕುಟುಂಬಗಳು ಮತ್ತು 1000 ಉದ್ಯೋಗಿಗಳನ್ನು ಈ ಸಮೀಕ್ಷೆ ಒಳಗೊಂಡಿದೆ. ಅವಶ್ಯಕ ವಸ್ತುಗಳ ಬೆಲೆ ಏರಿಕೆ ಮತ್ತು ಶಿಕ್ಷಣ, ಸಾರಿಗೆ ಮತ್ತು ಆರೋಗ್ಯದ ಅವಶ್ಯಕತೆಗಳಿಗೆ ವೆಚ್ಚಗಳು ಗಳಿಕೆಗಳ ಏರಿಕೆಗಿಂತ ಹೆಚ್ಚಾಗುತ್ತಿವೆ. ಇದರಿಂದ ಬಡ, ಕಡಿಮೆ ಆದಾಯ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಕೂಡ ಜೀವನ ಕಷ್ಟಕರವಾಗಿದೆ ಎಂದು ಅಸೋಚಾಮ್ ಸೆಕ್ರೆಟರಿ ರಾವತ್ ತಿಳಿಸಿದರು.

ಭಾರತ ಹಣದುಬ್ಬರ ಸಗಟು ದರಗಳನ್ನು ಆಧರಿಸಿದ್ದು, ಅಕ್ಟೋಬರ್‌ನಲ್ಲಿ ಶೇ.7ಕ್ಕೆ ಜಂಪ್ ಆಗಿದ್ದು, 8 ತಿಂಗಳಲ್ಲಿ ಅತ್ಯಧಿಕವಾಗಿದೆ. ಇಂಧನ, ಆಹಾರ ಮತ್ತು ಉತ್ಪಾದಿತ ವಸ್ತುಗಳ ಬೆಲೆ ಏರಿಕೆಯೇ ಇದಕ್ಕೆ ಕಾರಣವೆಂದು ಸರ್ಕಾರಿ ಅಂಕಿಅಂಶ ಬಯಲು ಮಾಡಿದೆ.

ವೆಬ್ದುನಿಯಾವನ್ನು ಓದಿ