ಗಾಂಧಿ ಉಡುಪಿಗೀಗ ಆಧುನಿಕ ಫ್ಯಾಷನ್ ಟಚ್

ಮಂಗಳವಾರ, 18 ಅಕ್ಟೋಬರ್ 2011 (08:59 IST)
ವಿವಿಧ ನಮೂನೆಯ ಉಡುಗೆ ತೊಡುಗೆಗಳ ಪೈಪೋಟಿಯಿಂದ ಮೂಲೆಗುಂಪಾಗುತ್ತಿರುವ ಸಾಂಪ್ರದಾಯಿಕ ಖಾದಿ ಉಡುಪನ್ನು ಆಧುನಿಕ ಮಾರುಕಟ್ಟೆಗೆ ಹೊಂದಿಕೆಯಾಗುವಂತೆ 'ಖಾದಿ ಡೆನಿಮ್' ಎಂಬ ಹೆಸರಿನಲ್ಲಿ ಹೊಸದಾಗಿ ಪರಿಚಯಿಸಲಾಗುತ್ತಿದೆ.

ರಾಷ್ಟ್ರಪಿತ ಮಹಾತ್ಮಗಾಂಧಿಯಿಂದ ಪ್ರಸಿದ್ಧಿ ಪಡೆದು ಇದೀಗ ರಾಷ್ಟ್ರೀಯ ಮತ್ತು ಅಂತಾರಾಷ್ಟೀಯ ವಸ್ತ್ರ ಮಾರುಕಟ್ಟೆಗಳಲ್ಲಿ ಬೇಡಿಕೆ ಕಳೆದುಕೊಳ್ಳುತ್ತಿರುವ ಸಾಂಪ್ರದಾಯಿಕ ಖಾದಿ ಉಡುಗೆಗಳಿಗೆ ಆಧುನಿಕ ವಿನ್ಯಾಸದ ಟಚ್ ಕೊಡಲಾಗುತ್ತಿದೆ.

ಸ್ಪದೇಶಿ ಪ್ರತಿಷ್ಠೆಯ ಸಂಕೇತವಾದ ಖಾದಿ ಉದ್ಯಮವನ್ನು ಮೇಲೆತ್ತುವ ನಿಟ್ಟಿನಲ್ಲಿ ರಾಜ್‌ಕೋಟ್ ಮೂಲದ ಸೌರಾಷ್ಟ್ರ ರಚನಾತ್ಮಕ ಸಮಿತಿ (ಎಸ್ಆರ್ಎಸ್) ಕಳೆದ ಎಂಟು ತಿಂಗಳ ಹಿಂದೆಯೇ ಖಾದಿ ಡೆನಿಮನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಪರಿಚಯಿಸಿ ಇದೀಗ ಯಶಸ್ಸಿನ ಹಾದಿಯಲ್ಲಿದೆ.

ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರು ಬ್ರಿಟೀಷ್ ಆಡಳಿತವನ್ನು ವಿರೋಧಿಸುವ ಪ್ರಮುಖ ಅಸ್ತ್ರವಾಗಿ ಖಾದಿಯನ್ನು ಬಳಸಿಕೊಂಡಿದ್ದರು ಹಾಗೂ ಖಾದಿ ಬಟ್ಟೆ ತಯಾರಿಸಲು ಬಳಸುವ ಚರಕವನ್ನು ಭಾರತೀಯ ಅಹಿಂಸಾ ಸ್ವಾತಂತ್ರ್ಯ ಹೋರಾಟದ ಲಾಂಛನವಾಗಿ ಮಾಡಿಕೊಂಡಿದ್ದರು.

ವೆಬ್ದುನಿಯಾವನ್ನು ಓದಿ