ಗೊಬ್ಬರ ಘಟಕ ಸ್ಥಾಪನೆಗೆ ರಿಲಯನ್ಸ್ ಸಿದ್ಧತೆ

ಗುರುವಾರ, 26 ಜುಲೈ 2007 (18:30 IST)
ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಜ್‌ನ ಪೆಟ್ರೊಕೆಮಿಕಲ್ ಎನರ್ಜಿ ಕಂಪೆನಿಯು ಭಾರತದಲ್ಲಿಯೇ ಅತಿದೊಡ್ಡದಾದ ರಸಾಯನಿಕ ಗೊಬ್ಬರಗಳ ಘಟಕ ತಯಾರಿಕೆಯಲ್ಲಿ 2.5 ಬಿಲಿಯನ್ ಡಾಲರ್‌ಗಿಂತ ಹೆಚ್ಚು ಹಣ ಹೂಡಲಿದೆ.

ಗುಜರಾತಿನ ಜಾಮಾನಗರ ಅಥವಾ ಆಂಧ್ರಪ್ರದೇಶ ಕೊಕಿನಾಡ್‌ನಲ್ಲಿ ವರ್ಷಕ್ಕೆ4 ಮಿಲಿಯನ್ ಟನ್ ರಾಸಾಯನಿಕ ಗೊಬ್ಬರ ತಯಾರಿಕಾ ಘಟಕ ಸ್ಥಾಪನೆಗಾಗಿ ರಾಸಾಯನಿಕ ಗೊಬ್ಬರ ಸಚಿವಾಲಯದ ಅನುಮತಿಗಾಗಿ ರಿಲಯನ್ಸ್ ಪ್ರಸ್ತಾವನೆಯನ್ನು ಸಲ್ಲಿಸಿದೆ ಎಂದು ಕಂಪನಿಯ ಅಧಿಕಾರಿಗಳು ತಿಳಿಸಿದ್ದಾರೆ.

ಆಂಧ್ರಪ್ರದೇಶ ಕರಾವಳಿಯ ಕೃಷ್ಣ-ಗೋದಾವರಿ ಕಣಿವೆಯಲ್ಲಿ ದೊರೆಯವ ನೈಸರ್ಗಿಕ ಅನಿಲವನ್ನು ಫರ್ಟಿಲೈಸರ್‌ ಘಟಕಕ್ಕೆ ಬಳಸಿಕೊಳ್ಳಲಾಗುವುದು. ಕೊಕಿನಾಡ್‌ನಲ್ಲಿರುವ ಕೆಜಿ-ಡಿ6 ನೈಸರ್ಗಿಕ ಅನಿಲವನ್ನು ಗುಜರಾತ್‌ ಗಡಿಗೆ ಸಾಗಿಸಲು 1,400 ಕಿಮೀ ಕೊಳವೆ ಮಾರ್ಗವನ್ನು ಅಳವಡಿಸಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಈ ಪ್ರಸ್ತಾಪಕ್ಕೆ ಫರ್ಟಿಲೈಸರ್ ಮತ್ತು ಪವರ್ ವಲಯಗಳಿಂದ ವಿರೋಧವನ್ನು ರಿಲಯನ್ಸ್ ಎದುರಿಸುತ್ತಿದೆ. ತನ್ನಷ್ಟಕ್ಕೆ ತಾನೆ ಹಣ ಪಾವತಿ ಮಾಡಿಕೊಳ್ಳುವ ಮೂಲಕ ಈ ಸವಾಲು ಎದುರಿಸಲು ಕಂಪೆನಿ ಚಿಂತಿಸಿದೆ.

ಫರ್ಟಿಲೈಸರ್‌ ಉತ್ಪನ್ನಗಳನ್ನು ಭಾರತ ಪ್ರಮುಖವಾಗಿ ಆಮದು ಮಾಡಿಕೊಳ್ಳುತ್ತದೆ. ಪ್ರತಿವರ್ಷ ಸುಮಾರು 5 ಮಿಲಿಯನ್ ಟನ್ ಉತ್ಪನ್ನಗಳನ್ನು ವಿದೇಶಿದಿಂದ ರಫ್ತು ಮಾಡಿಕೊಳ್ಳಲಾಗುತ್ತಿದೆ.

ಅಂತಾರಾಷ್ಟ್ರೀಯ ಮಟ್ಟದ ಘಟಕವನ್ನು ಸ್ಥಾಪಿಸುವ ಕುರಿತು ನಾವು ತುಂಬಾ ವಿಶ್ವಾಸ ಪೂರ್ಣರಾಗಿದ್ದೇವೆ. ಅಲ್ಲದೇ ಉತ್ತಮ ಬೆಲೆಯನ್ನು ಕೂಡಾ ನಿಗದಿಪಡಿಸಲಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ