ಗ್ರಾಹಕರ ಕಿಸೆಗೆ ಕತ್ತರಿ : ಡಿಸೇಲ್‌ ದರದಲ್ಲಿ ಹೆಚ್ಚಳ

ಶನಿವಾರ, 30 ನವೆಂಬರ್ 2013 (18:39 IST)
PR
ತೈಲಬೆಲೆ ದಿನೆದಿನೆ ಹೆಚ್ಚಳವಾಗುತ್ತಿದೆ. ಈ ಮದ್ಯೇ ಇಂದು ಡಿಸೇಲ್‌ ಬೆಲೆಯ ಹೆಚ್ಚಳ ಮಾಡಿದ್ದಾರೆ. ಪ್ರತಿ ಲೀಟರ್‌ ಡಿಸೇಲ್‌ಗೆ 50 ಪೈಸೆ ಹೆಚ್ಚಳ ಮಾಡಲಾಗಿದೆ. ಇಂದು ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದೆ ಎಂದು ಮೂಲಗಳು ತಿಳಿಸಿವೆ.

ಕಚ್ಚಾ ತೈಲಬೆಲೆಯ ದರದ ಹೆಚ್ಚಳವಾದ ಕಾರಣ ಡಿಸೇಲ್‌ ಬೆಲೆಯಲ್ಲಿ ಹೆಚ್ಚಳ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ದೆಹಲಿ ವಿಧಾನಸಭಾ ಚುನಾವಣೆಗಿಂತ ಮೊದಲು ತೈಲ ಬೆಲೆಯಲ್ಲಿ ಇಳಿಕೆಯಾಗಬಹುದು ಎಂದು ಮೊನ್ನೆ ಮಾದ್ಯಮಗಳು ವರದಿ ಮಾಡಿದ್ದವು. ಆದರೆ ಈ ವರದಿ ಹುಸಿಯಾಗಿ, ಡಿಸೇಲ್‌ ಬೆಲೆಯಲ್ಲಿ ಹೆಚ್ಚಳವಾಗಿದೆ.

ವೆಬ್ದುನಿಯಾವನ್ನು ಓದಿ