ಚಿಕ್ಕ ಕಾರುಗಳು , ಬೈಕ್‌ ಮತ್ತು ಎಸ್‌‌‌ಯುಬಿ ಬೆಲೆಗಳು ಕಡಿಮೆಯಾಗಲಿವೆ

ಸೋಮವಾರ, 17 ಫೆಬ್ರವರಿ 2014 (16:02 IST)
ನವದೆಹಲಿ : ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಮಂಡಿಸಿದ 2014ರ ಸಣ್ಣ ಮತ್ತು ಕೊನೆಯ ಬಜೆಟ್‌‌‌ನಲ್ಲಿ ಕಾರು , ಬೈಕ್‌ ಮತ್ತು ಎಸ್‌ಯುವಿ ದರಗಳು ಕಡಿಮೆಯಾಗಲಿವೆ ಎಂದು ಘೋಷಣೆ ಮಾಡಿದ್ದಾರೆ.
PR

ಎಸ್‌‌ಯುವಿ ಕಾರುಗಳಲ್ಲಿ ಶೇ30 ರಷ್ಟು ಡ್ಯೂಟಿ ಶೇ.24 ಕ್ಕೆ ಇಳಿಸುವ ಬಗ್ಗೆ ಸಚಿರು ತಿಳಿಸಿದ್ದಾರೆ. ಹಾಗೆ ಸಿಕ್ಕ ಕಾರುಗಳ ಮೇಲಿನ ಎಕ್ಸಾಯಿಟ್‌‌ ಡ್ಯೂಟಿಯಲ್ಲಿ ಶೇ.12 ರಿಂದ ಶೇ.8 ರವರೆಗೆ ಇಳಿಸುವ ಸೂಚನೆ ಚಿದಂಬರಂ ನೀಡಿದ್ದಾರೆ. ಮದ್ಯಮ ಸೈಝ್‌ ಕಾರಿನ ಡ್ಯುಟಿ ಯಲ್ಲಿ ಶೇ.24 ರಿಂದ ಶೇ.20 ರವರೆಗೆ ಕಡಿಮೆಯಾಗಲಿದೆ ಮತ್ತು ದೊಡ್ಡ ಕಾರುಗಳ ಉತ್ಪಾದನೆ ಶುಲ್ಕದಲ್ಲಿ ಶೇ.27 ರಿಂದ 24ಕ್ಕೆ ಇಳಿಸಲಾಗುವುದು ಎಂದು ವಿತ್ತ ಮಂತ್ರಿ ತಿಳಿಸಿದ್ದಾರೆ.

ದ್ವಿಚಕ್ರ ವಾಹನ ಖರಿದಿಮಾಡುವವರಿಗೆ ಸಂತೋಷದ ಸುದ್ದಿಯೊಂದಿದೆ. ಬೈಕ್‌‌ , ಸ್ಕೂಟರ್‌‌ಗಳ ಮೇಲಿನ ಉತ್ಪಾದನೆ ಶುಲ್ಕ ಶೇ.12 ರಿಂದ ಶೇ.8 ರವರೆಗೆ ಇಳಿಕೆ ಮಾಡಲಾಗಿದೆ ಎಂದು ಬಜೆಟ್‌‌ನಲ್ಲಿ ಪಿ. ಚಿದಂಬರಂ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ