ಚಿನ್ನದ ದರ : ಪ್ರತಿ 10 ಗ್ರಾಂಗೆ 15000 ರೂ.

ಶನಿವಾರ, 30 ಮೇ 2009 (18:10 IST)
ಡಾಲರ್ ಮೌಲ್ಯ ದುರ್ಬಲಗೊಂಡ ಹಿನ್ನೆಲೆಯಲ್ಲಿ ಜಾಗತಿಕ ಸ್ಥಿರ ವಹಿವಾಟಿನಿಂದಾಗಿ ಚಿನ್ನದ ದರ ಪ್ರತಿ 10 ಗ್ರಾಂಗೆ 15000 ರೂಪಾಯಿಗಳಿಗೆ ಏರಿಕೆ ಕಂಡಿದೆ.

ಶೇರುಪೇಟೆ ಹೂಡಿಕೆದಾರರು ಹಾಗೂ ಆಭರಣಗಳ ತಯಾರಕರು ಚಿನ್ನದ ಖರೀದಿಯಲ್ಲಿ ತೊಡಿಗಿದ್ದರಿಂದ ಚಿನ್ನದ ಗ್ರಾಹಕರ ಮೇಲೆ ಸಕರಾತ್ಮಕ ಪರಿಣಾಮ ಬೀರಿದೆ ಎಂದು ಚಿನಿವಾರಪೇಟೆಯ ಮೂಲಗಳು ತಿಳಿಸಿವೆ.

ಸ್ಟ್ಯಾಂಡರ್ಡ್ ಚಿನ್ನ ಹಿಂದಿನ ದಿನದ ವಹಿವಾಟಿನಲ್ಲಿ 155 ರೂಪಾಯಿ ಏರಿಕೆ ಕಂಡಿತ್ತು . ಇಂದಿನ ಆರಂಭಿಕ ವಹಿವಾಟಿನಲ್ಲಿ ಮತ್ತೆ 125 ರೂಪಾಯಿಗಳ ಏರಿಕೆ ಕಂಡು 15,100 ರೂಪಾಯಿಗಳಿಗೆ ತಲುಪಿದೆ.

ಚಿನ್ನದ ಆಭರಣಗಳ ದರ ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ 14,825 ರೂಪಾಯಿಗಳಿಗೆ ತಲುಪಿತ್ತು. ಇಂದಿನ ವಹಿವಾಟಿನಲ್ಲಿ 14,950 ರೂಪಾಯಿಗಳಿಗೆ ಏರಿಕೆ ಕಂಡಿದೆ.

ಸಾಗರೋತ್ತರ ಮಾರುಕಟ್ಟೆಗಳ ಸ್ಥಿರ ವಹಿವಾಟಿನಿಂದಾಗಿ ದೇಶಿಯ ಚಿನಿವಾರಪೇಟೆಯಲ್ಲಿ ಚಿನ್ನದ ದರದಲ್ಲಿ ಏರಿಕೆಯಾಗಿದೆ ಎಂದು ಮಾರುಕಟ್ಟೆಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮಾರುಕಟ್ಟೆಯಲ್ಲಿ ಬೆಳ್ಳಿಯ ದರ ಕೂಡಾ 420 ರೂಪಾಯಿಗಳ ಏರಿಕೆಯಾಗಿ ಪ್ರತಿ ಕೆಜಿಗೆ 24,170 ರೂಪಾಯಿಗಳಿಗೆ ತಲುಪಿದೆ ಎಂದು ಚಿನಿವಾರಪೇಟೆಯ ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ