ಜಗತ್ತಿನ ಶ್ರೀಮಂತರ ಪಟ್ಟಿಗೆ ಭಾರತೀಯರು

ಶನಿವಾರ, 22 ಸೆಪ್ಟಂಬರ್ 2007 (15:25 IST)
ಜಗತ್ತಿನ ಅತಿ ಶ್ರೀಮಂತರ ಹೆಸರಿನ ಪಟ್ಟಿಯಲ್ಲಿ ಭಾರತೀಯ ಮೂಲದ ಅಮೆರಿಕದ ನಾಲ್ಕು ಮಂದಿ ಇದರಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಅಕೌಸ್ಟಿಕ್ಸ್ ಸ್ಥಾಪಿಸಿರುವ ಅಮರ್ ಬೋಸ್, ಜಗತ್ತಿನ ಮೊದಲ ಅತಿಮುನ್ನಡೆಯ ಸರ್ಚ್ ಎಂಜಿನ್ ಸ್ಥಾಪಕ ನಿರ್ದೇಶಕ ಕವಿತಾರ್ಕ್ ಶ್ರೀರಾಮ್, ಜಂಟಿ ಬಂಡವಾಳ ಹೂಡಿಕೆಗಾರರ ವಿನೋದ ಖೋಸ್ಲಾ ಹಾಗೂ ಮಾಹಿತಿ ತಂತ್ರಜ್ಞಾನದ ಹೊರಗುತ್ತಿಗೆಯ ಸಿಇಒ ಭರತ್ ದೇಸಾಯಿ ಅವರು ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಭಾರತೀಯ ಮೂಲದ ಅಮೆರಿಕ ವಾಸಿಗಳಾಗಿದ್ದಾರೆ.

ಸುಲ್ತಾನ್ ಆಫ್ ಸೌಂಡ್ ಸಂಸ್ಥಾಪಕ 77 ವರ್ಷದ ಅಮರ್ ಬೋಸ್ ಹಾಗೂ ಜಗತ್ತಿನಲ್ಲಿ ಮುಂಚೂಣಿಯಲ್ಲಿರುವ ಸರ್ಚ್ ಎಂಜಿನ್ ನಡೆಸಿಕೊಂಡು ಹೋಗುತ್ತಿರುವ ಕವಿತಾರ್ಕ್ ಶ್ರೀರಾಮ್ ಅವರು 1.8 ಶತಕೋಟಿ ಡಾಲರ್ ಮೌಲ್ಯವನ್ನು ಹೊಂದಿದ್ದು, ಇಬ್ಬರು ಫೋರ್ಬ್ಸ್ ಪಟ್ಟಿಯಲ್ಲಿ 271 ನೇ ಸ್ಥಾನ ಪಡೆದುಕೊಂಡಿದ್ದಾರೆ.

ಕಳೆದ ವರ್ಷ 242 ನೇ ಸ್ಥಾನ ಪಡೆದಿದ್ದ ಬೋಸ್ ಹಾಗೂ ಶ್ರೀರಾಮ್ ಅವರು ಈ ಋತುಮಾನದಲ್ಲಿ ಶ್ರೇಯಾಂಕದಲ್ಲಿ ಕುಸಿತ ಕಂಡರೂ, 1.5 ಶತಕೋಟಿ ಡಾಲರ್ ಇದ್ದ ಅವರ ಆಸ್ತಿಯು ಈ ಬಾರಿ 1.8 ಶತಕೋಟಿ ಡಾಲರ್‌ಗೆ ಏರಿದೆ.

ಕಳೆದ 43 ವರ್ಷಗಳ ಹಿಂದೆ ಸುಲ್ತಾನ್ ಆಫ್ ಸೌಂಡ್ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದ ಅಮರ್ ಬೋಸ್ ಅವರು ಈಗ ಜಗತ್ತಿನ ಶ್ರೀಮಂತರ ಪೈಕಿ ಒಬ್ಬರಾಗಿದ್ದಾರೆ.

ವೆಬ್ದುನಿಯಾವನ್ನು ಓದಿ