ಜಿಂದಾಲ್ ಸ್ಟೀಲ್ ಯೋಜನೆಗೆ ಮಮತಾ ಬೆಂಬಲ

ಮಂಗಳವಾರ, 4 ನವೆಂಬರ್ 2008 (11:45 IST)
PTI
ಸಿಂಗೂರಿನಿಂದ ನ್ಯಾನೋ ಯೋಜನೆ ಹೊರಹೋದ ಹಿನ್ನೆಲೆಯಲ್ಲಿ ಪಶ್ಚಿಮಬಂಗಾಲದ ಉದ್ಯಮ ಅಭಿವೃದ್ಧಿಗೆ ತಡೆಯುಂಟುಮಾಡುತ್ತಿದ್ದಾರೆ ಎಂಬ ಆರೋಪದಿಂದ ಮುಕ್ತರಾಗುವ ನಿರೀಕ್ಷೆಯೊಂದಿಗೆ, ಕಂಪನಿ ಹೂಡಿಕೆದಾರರೇ ಜಮೀನನ್ನು ರೈತರಿಂದ ನೇರವಾಗಿ ಖರೀದಿಸುತ್ತಿರುವುದರಂದ ಜೆಎಸ್‌ಡಬ್ಲ್ಯೂ ಬಂಗಾಳ ಸ್ಟೀಲ್ ಯೋಜನೆಗೆ ತಾನು ಬೆಂಬಲ ನೀಡುವುದಾಗಿ ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.

ಸಿಂಗೂರಿನಲ್ಲಿನ ಟಾಟಾ ಮೋಟಾರ್ಸ್ ಯೋಜನೆಯನ್ನು ಯಾಕೆ ವಿರೋಧಿಸಲಾಯಿತು ಎಂಬುದನ್ನು ಸರಕಾರವು ವಿಚಾರ ಮಾಡಬೇಕು. ರೈತರಿಂದ ಫಲವತ್ತಾದ ಭೂಮಿಯನ್ನು ಬಲವಂತವಾಗಿ ವಶಪಡಿಸಿಕೊಳ್ಳಲು ಸರಕಾರ ಮತ್ತು ಟಾಟಾ ಮೋಟಾರ್ಸ್ ಕೈಜೋಡಿಸಿತ್ತು. ಈ ಕಾರಣದಿಂದಾಗಿ ನ್ಯಾನೋ ಯೋಜನೆಯನ್ನು ವಿರೋಧಿಸಿದೆವು ಆದರೆ, ಜೆಎಸ್‌ಡಬ್ಲ್ಯೂ ಸಮೂಹವು ಈ ರೀತಿ ಮಾಡಿಲ್ಲ ಆದ್ದರಿಂದ ಈ ಯೋಜನೆಗೆ ಬೆಂಬಲ ನೀಡಲಾಗುವುದು ಎಂದು ಬ್ಯಾನರ್ಜಿ ಹೇಳಿದ್ದಾರೆ.

ಟಾಟಾ ಮೋಟಾರ್ಸ್‌ನ ಮೂಲ ಸ್ಥಾವರದ ಕಾರ್ಯವನ್ನು ಸ್ಥಗಿತಗೊಳಿಸುವಂತೆ ತೃಣಮೂಲ ಕಾಂಗ್ರೆಸ್ ಟಾಟಾಗೆ ಒತ್ತಾಯಿಸಿಯೇ ಇರಲಿಲ್ಲ. ಬದಲಾಗಿ, ಪೂರಕ ಸ್ಥಾವರನ್ನು ಸ್ಥಳಾಂತರಗೊಳಿಸಿ, 400 ಎಕರೆ ಜಮೀನನ್ನು ರೈತರಿಗೆ ನೀಡುವಂತೆ ಒತ್ತಾಯಿಸಲಾಗಿತ್ತು ಎಂದು ಬ್ಯಾನರ್ಜಿ ಸ್ಪಷ್ಟಪಡಿಸಿದ್ದಾರೆ.

ತೃಣಮೂಲ ಕಾಂಗ್ರೆಸ್‌ನ ನಿರಂತರ ಪ್ರತಿಭಟನೆಯಿಂದಾಗಿ ಟಾಟಾ ಮೋಟಾರ್ಸ್ ತನ್ನ ನ್ಯಾನೋ ಯೋಜನೆಯನ್ನು ಪಶ್ಚಿಮ ಬಂಗಾಲದಿಂದ ಹಿಂದಕ್ಕೆ ತೆಗೆಯುವುದಾಗಿ ಟಾಟಾ ಮೋಟಾರ್ಸ್ ಅಕ್ಟೋಬರ್ ಮೂರರಂದು ಘೋಷಿಸಿತ್ತು.

ವೆಬ್ದುನಿಯಾವನ್ನು ಓದಿ