ಜೆಪಿ ಮಾರ್ಗನ್‌ನಿಂದ 3000 ಉದ್ಯೋಗ ಕಡಿತ

ಶನಿವಾರ, 22 ನವೆಂಬರ್ 2008 (09:41 IST)
ನವದೆಹಲಿ: ನ್ಯೂಯಾರ್ಕ್ ಮೂಲದ ಬ್ಯಾಂಕಿಂಗ್ ದೈತ್ಯ ಜೆಪಿ ಮಾರ್ಗನ್ ತನ್ನ ನೌಕರವರ್ಗದಲ್ಲಿ 10 ಪ್ರತಿಶತ ಅಂದರೆ 3000 ನೌಕರರನ್ನು ಕಡಿತಗೊಳಿಸಲು ನಿರ್ಧರಿಸಿದೆ.

ವರದಿಗಳ ಪ್ರಕಾರ ಎಲ್ಲಾ ಹಂತಗಳಲ್ಲಿಯೂ ನಡೆಯುವ ಉದ್ಯೋಗ ಕಡಿತವನ್ನು ಈ ವರ್ಷದ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು.

ಜೆಪಿ ಮಾರ್ಗನ್ ಮುಂದಿನ ವರ್ಷದಿಂದ 60,000 ದಿಂದ 70,000 ಡಾಲರ್‌ಗಳಿಗಿಂತ ಹೆಚ್ಚು ಆದಾಯ ಗಳಿಸುವ ನೌಕರರ ವೇತನವನ್ನು ಕಡಿತಗೊಳಿಸಲು ನಿರ್ಧರಿಸಿದೆ ಎಂದು ವರದಿಗಳು ಹೇಳುತ್ತವೆ.

ಗೋಲ್ಡ್‌ಮಾನ್ ಸಾಚ್ಸ್ ಗ್ರೂಪ್ ಇತ್ಯಾದಿ ಇತರ ಬ್ಯಾಂಕಿಂಗ್ ದಿಗ್ಗಜರು ಸಹ ಜೆಪಿ ಮಾರ್ಗನ್‌ನ ಹಾದಿಯಲ್ಲೆ ಸಾಗಲಿವೆ.

ವೆಬ್ದುನಿಯಾವನ್ನು ಓದಿ