ಝೋಲೊ ಬಿಡುಗಡೆ ಮಾಡಿದೆ 6 ಇಂಚ ಡಿಸಪ್ಲೆಯ ಸ್ಮಾರ್ಟ್‌‌‌ಫೋನ್

ಸೋಮವಾರ, 31 ಮಾರ್ಚ್ 2014 (17:26 IST)
PR
ಝೋಲೊ ಕಂಪೆನಿ ಕ್ಯೂ ಸೀರೀಜ್‌ನ ಹೊಸ ಸ್ಮಾರ್ಟ್‌ಫೋನ್ ಕ್ಯೂ 2500 ಬಿಡುಗಡೆ ಮಾಡಿದೆ. ಕಂಪೆನಿಯ ವೆಬ್‌‌ಸೆಟ್‌‌‌‌ನಲ್ಲಿ ಇದರ ಬೆಲೆ ಕೇವಲ 14,999 ರೂಪಾಯಿ ಎಂದು ತಿಳಿಸಿದೆ.ಆದರೆ ಮಾರುಕಟ್ಟೆಯಲ್ಲಿ ಯಾವಾಗ ಲಭ್ಯವಾಗಲಿದೆ ಎನ್ನುವ ಬಗ್ಗೆ ಖಚಿತ ಮಾಹಿತಿಗಳಿಲ್ಲ ಎಂದು ಮೂಲಗಳು ತಿಳಿಸಿವೆ.

ಝೋಲೊ ಕ್ಯೂ25000 ಆಂಡ್ರೈಡ್‌ 4.2 ಜೆಲಿಬಿನ್ ಅಪರೇಟಿಂಗ್ ಸಿಸ್ಟಂ ಮೂಲಕ ಕಾರ್ಯ ನಿರ್ವಹಿಸುತ್ತದೆ. ಈ ಸ್ಮಾರ್ಟ್‌‌‌‌ಫೋನ್ ಎರಡು ಸಿಮ್‌‌ಗಳಿಗೆ ಸಪೋರ್ಟ್ ಮಾಡುತ್ತದೆ. ಇದರಲ್ಲಿ 6 ಇಂಚಿನ ಹೆಚ್‌‌ಡಿ ಐಪಿಎಸ್‌ ಡಿಸಪ್ಲೆ ಇದೆ. ಇದರ ರೆಜಾಲ್ಯೂಶನ್‌‌‌ 720X1280 ಪಿಕ್ಸಲ್‌‌ ಇದೆ. ಇದರಲ್ಲಿ 1.3ಜಿಹೆಚ್‌‌‌‌ಝೆಡ್‌ನ ಕ್ವಾಡ ಕೋರ ಮಿಡಿಯಾ ಟೆಕ್‌‌‌ ( ಎಮ್‌‌ಟಿಕೆ 6582) ಪ್ರೊಸೆಸರ್‌ ಅಳವಡಿಸಲಾಗಿದೆ ಮತ್ತು ಈ ಸ್ಮಾರ್ಟ್‌‌ಪೋನ್ 1ಜಿಬಿ ರ್ಯಾಮ್‌ ಹೊಂದಿದೆ.

ಇದರ ರಿಯರ್ ಕ್ಯಾಮೆರಾ 8 ಎಮ್‌‌ಪಿ ಇದೆ, ಜೊತೆಗೆ ಎಲ್‌‌ಇಡಿ ಫ್ಲ್ಯಾಶ್ ಮತ್ತು ಬಿಎಸ್‌‌ಐ ಸೆನ್ಸಾರ್ ಅಳವಡಿಸಲಾಗಿದೆ. ಎದುರುಗಡೆ 2 ಎಮ್‌‌‌ಪಿ ಕ್ಯಾಮೆರಾ ಇದೆ. ಝೋಲೊ ಕ್ಯೂ25000 ರಿಯರ ಕ್ಯಾಮೆರಾದಲ್ಲಿ ಸೀನ ಡಿಟೆಕ್ಶಮನ , ಹೆಚ್‌‌ಟಿಆರ್ , ಫೇಸ್‌ ರಿಕಗ್ನಿಶನ ಮತ್ತು ಜಿಯೋ ಟೈಗಿಂಗ್‌‌ ತರಹದ ಫಿಚರ್‌ ಇದೆ. ಈ ಸ್ಮಾರ್ಟ್‌‌‌‌ಫೋನ್‌‌ನಲ್ಲಿ 4 ಜಿಬಿ ಇಂಟರನಲ್‌‌ ಮೆಮೋರಿಯಿದೆ ಮತ್ತು ಇದರಲ್ಲಿ 32 ಜಿಬಿ ವರೇಗಿನ ಮೆಮೋರಿ ಕಾರ್ಡ ಬಳಸಬಹುದಾಗಿದೆ.

ಇದರಲ್ಲಿ ಬ್ಲ್ಯೂಟೂಥ್ , ವೈಫೈ , ಜಜಿಪಿಎಸ್‌‌ /ಎ-ಜಿಪಿಎಸ್‌ , ಜಿಪಿಆರ್‌‌ಎಸ್‌/ಎಜ್‌ ಮತ್ತು 3ಜಿ ಕನೆಕ್ಟಿವಿಟಿ ಸೌಲಭ್ಯಗಳು ಇವೆ. ಇದರ ಬ್ಯಾಟರಿ 3000ಎಮ್‌‌‌‌‌ಎಹೆಚ್‌ ಇದೆ. ಈ ಸ್ಮಾರ್ಟ್‌‌ಪೋನ್ 2ಜಿ ನೆಟ್ವರ್ಕ ಮೂಲಕ 40 ಗಂಟೆಯವರೇಗೆ ಟಾಕ್‌‌‌ಟೈಮ ಮತ್ತು 600 ಗಂಟೆಯವರೆಗೆ ಸ್ಟ್ಯಾಂಡ್‌‌‌ ಬೈ ಟೈಮ್ ದವರೆಗೆ ಇದರಲ್ಲಿ ಪ್ರಬಲವಾದ ಬ್ಯಾಟರಿ ಹೊಂದಿದೆ.

ವೆಬ್ದುನಿಯಾವನ್ನು ಓದಿ