ಟಿವಿಎಸ್‌ ಮೊಟರ್ಸ್‌ ಮಾರಾಟದಲ್ಲಿ ಇಳಿಕೆ

ಮಂಗಳವಾರ, 3 ಡಿಸೆಂಬರ್ 2013 (19:06 IST)
PR
ದ್ವಿಚಕ್ರ ಮತ್ತು ತ್ರಿಚಕ್ರ ವಾಹನದ ಮಾರಾಟದಲ್ಲಿ ಇಳಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 9,900 ಕಡಿಮೆ ವಾಹನಗಳ ಮಾರಾಟವಾಗಿವೆ. ಕಳೆದ ತಿಂಗಳು 1,61,908 ವಾಹನಗಳನ್ನು ಮಾರಾಟ ಮಾಡಲಾಗಿತ್ತು ಎಂದು ಕಂಪೆನಿಯ ಮೂಲಗಳು ತಿಳಿಸಿವೆ. ಕಳೆದ ವರ್ಷ ಇದೇ ತಿಂಗಳು 1,71,837 ವಾಹನಗಳ ಮಾರಾಟ ಮಾಡಲಾಗಿತ್ತು.

ಕಳೆದ ತಿಂಗಳು ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಇಳಿಕೆಯಾದರೆ, ತ್ರಿಚಕ್ರ ವಾಹನಗಳ ಮಾರಾಟದಲ್ಲಿ ಶೇ.25 ರಷ್ಟು ಹೆಚ್ಚಳವಾಗಿದೆ.

ಕಳೆದ ತಿಂಗಳು 1,55,604 ದ್ವಿಚಕ್ರ ವಾಹನಗಳು ಮತ್ತು 6,304 ತ್ರಿಚಕ್ರ ವಾಹನಗಳ ಮಾರಾಟವಾಗಿವೆ. ಒಂದು ವರ್ಷದ ಹಿಂದೆ ಕಂಪೆನಿ 1,66,78 ದ್ವಿಚಕ್ರ ಮತ್ತು 5,054 ತ್ರಿಚಕ್ರ ವಾಹನಗಳನ್ನು ಮಾರಾಟ ಮಾಡಿತ್ತು .


ವೆಬ್ದುನಿಯಾವನ್ನು ಓದಿ