ತೈಲ ಬೆಲೆಗಳಲ್ಲಿ ಭಾರಿ ಏರಿಕೆ

ಶನಿವಾರ, 27 ಅಕ್ಟೋಬರ್ 2007 (15:39 IST)
ಕಚ್ಚಾ ತೈಲದ ಶ್ರೀಮಂತ ರಾಷ್ಟ್ರ ಇರಾನ್‌ನಲ್ಲಿ ಬಿಕ್ಕಟ್ಟು ತೀವ್ರಗೊಂಡಿದ್ದರಿಂದ ಹಾಗೂ ಅಮೆರಿಕದ ಇಂಧನ ಪೂರೈಕೆಯು ಬಿಗಿಗೊಂಡ ಪರಿಣಾಮವಾಗಿ ಶುಕ್ರವಾರ ಅಂತ್ಯಗೊಂಡ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್‌ಗೆ 92 ಡಾಲರ್‌ಗೆ ಅಂತ್ಯಗೊಂಡಿದ್ದು, ಇದೇ ಮೊದಲ ಬಾರಿಗೆ ನ್ಯೂಯಾರ್ಕ್‌ನಲ್ಲಿ ಅತ್ಯಂತ ದುಬಾರಿಯಾಗಿದೆ.

"ಈಗಾಗಲೇ ಕಚ್ಚಾ ತೈಲದ ಬೆಲೆಯು 90 ಡಾಲರ್ ತಲುಪಿದ್ದು, ಇನ್ನು ಮುಂದೆ ಇದರ ದರವು 100 ಕ್ಕೆ ಹೋಗುವುದು ಬಹಳ ಸುಲಭವಾಗಿದೆ. ತೈಲ ಮಾರುಕಟ್ಟೆಯಲ್ಲಿ ಏನು ಬೇಕಾದರೂ ಆಗುವ ಸಾಧ್ಯತೆ ಇದೆ" ಎಂದು ಅಸ್ಟ್‌ಮಾಕ್ಸ್ ಫಂಡ್ ವ್ಯವಸ್ಥಾಪಕ ತೆಸ್ಟು ಎಮೋರಿ ಹೇಳಿದ್ದಾರೆ.

ಡಿಸೆಂಬರ್‌ನಲ್ಲಿ ವಿತರಣೆಯಾಗಲಿರುವ ಲೈಟ್ ಸ್ವೀಟ್ ಕಚ್ಚಾ ತೈಲದಲ್ಲಿ ನ್ಯೂಯಾರ್ಕ್‌ನಲ್ಲಿರುವ ಮುಖ್ಯ ತೈಲಾಗಾರದಲ್ಲಿ ಪ್ರತಿ ಬ್ಯಾರೆಲ್‌ಗೆ 92.22 ಡಾಲರ್‌ಗೆ ಏರಿತ್ತು.

ಬುಧವಾರ ಅಂತ್ಯಗೊಂಡಿದ್ದಾಗ 62 ಸೆಂಟ್‌ ಏರಿಕೆಯಾಗಿ ಕೊನೆಗೊಂಡ ಬೆಲೆಯಲ್ಲಿ 91.10 ಡಾಲರ್ ಆಗಿತ್ತು.

ಆದರೆ, ಡಿಸೆಂಬರ್‌ನಲ್ಲಿ ವಿತರಣೆಯಾಗಲಿರುವ ಲಂಡನ್‌ನ ಬ್ರೆಂಟ್ ನಾರ್ತ್ ಸಮುದ್ರ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ 89.30 ಡಾಲರ್‌ಗೆ ಕೊನೆಗೊಂಡಿತ್ತು.

ವೆಬ್ದುನಿಯಾವನ್ನು ಓದಿ