ದರ ಏರಿಕೆ: ಚಿನ್ನದ ಖರೀದಿದಾರರಿಗೆ ಶಿವರಾತ್ರಿ ಶಾಕ್

ಬುಧವಾರ, 2 ಮಾರ್ಚ್ 2011 (17:03 IST)
PTI
ಮದುವೆ ಸೀಜನ್‌ನಿಂದಾಗಿ ಚಿನ್ನದ ಖರೀದಿಯಲ್ಲಿ ಹೆಚ್ಚಳವಾಗಿ, ಚಿನ್ನದ ದರ ಪ್ರತಿ 10 ಗ್ರಾಂಗೆ 200 ರೂಪಾಯಿಗಳ ಏರಿಕೆಯಾಗಿ 21,270 ರೂಪಾಯಿಗಳಿಗೆ ತಲುಪಿದೆ.

ಏತನ್ಮಧ್ಯೆ, ಕೈಗಾರಿಕೋದ್ಯಮ ಕ್ಷೇತ್ರ ಹಾಗೂ ನಾಣ್ಯಗಳ ತಯಾರಕರಿಂದ ಬೇಡಿಕೆಯಲ್ಲಿ ಕುಸಿತವಾಗಿದ್ದರಿಂದ, ಬೆಳ್ಳಿಯ ದರದಲ್ಲಿ ದಾಖಲೆಯ ಇಳಿಕೆಯಾಗಿ ಪ್ರತಿ ಕೆಜಿಗೆ 700 ರೂಪಾಯಿ ಕುಸಿತವಾಗಿ 50,000 ರೂಪಾಯಿಗಳಿಗೆ ತಲುಪಿದೆ.

ಸಾಗರೋತ್ತರ ಮಾರುಕಟ್ಟೆಗಳಲ್ಲಿ ಚಿನ್ನದ ದರ ಪ್ರತಿ ಔನ್ಸ್‌ಗೆ, 1,435.60 ಡಾಲರ್‌ಗಳಿಗೆ ತಲುಪಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.

ಲಿಬಿಯಾ ದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರದಿಂದಾಗಿ, ಅಂತಾರಾಷ್ಟ್ರೀಯ ಕಚ್ಚಾ ತೈಲ ಮಾರುಕಟ್ಟೆ ತೊಳಲಾಟದ ಸ್ಥಿತಿಯಲ್ಲಿರುವುದರಿಂದ ಸುರಕ್ಷಿತ ಠೇವಣಿಯಾದ ಚಿನ್ನದ ಖರೀದಿಗೆ ಹೂಡಿಕೆದಾರರು ಹೆಚ್ಚಿನ ಆಸಕ್ತಿ ವಹಿಸಿದ್ದಾರೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ