ದೀಪಾವಳಿ: ಬಂಗಾರದ ಬೆಲೆಯಲ್ಲಿ ಭಾರಿ ಏರಿಕೆ

ಸೋಮವಾರ, 29 ಅಕ್ಟೋಬರ್ 2007 (13:31 IST)
ದೀಪಾವಳಿ ಮತ್ತು ಮದುವೆಯ ಸಂಭ್ರಮಕಾಲ ಆಗಮಿಸಿರುವ ಹಿನ್ನೆಲೆಯಲ್ಲಿ ಬಂಗಾರ ಖರೀದಿಗೆ ಹೆಚ್ಚಿನ ಬೇಡಿಕೆ ಬಂದಿದ್ದರಿಂದ ಬೆಲೆಯಲ್ಲಿ ಭಾರಿ ಏರಿಕೆ ಉಂಟಾಗಿದ್ದು ,10,040ರೂ.ಗಳಿಗೆ ತಲುಪಿದೆ ಎಂದು ಚಿನ್ನದ ಮಾರುಕಟ್ಟೆಯ ಮೂಲಗಳು ತಿಳಿಸಿವೆ.

ಬಂಗಾರದ ಬೇಡಿಕೆಯಲ್ಲಿ ನಿಧಾನವಾಗಿ ಹೆಚ್ಚಳವಾಗುತ್ತಿದ್ದರೂ ಹೆಚ್ಚುತ್ತಿರುವ ಬಂಗಾರದ ಬೆಲೆಯಂದಾಗಿ ಸ್ಥಳಿಯ ಮಾರುಕಟ್ಟೆಯ ಖರೀದಿಯಲ್ಲಿ ಕುಸಿತವಾಗಬಹುದು ಎಂದು ವ್ಯಾಪಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಡಾಲರ್‌ಗಳ ಹಾಗೂ ಕಚ್ಚಾ ತೈಲಗಳ ಬೆಲೆಗಳಲ್ಲಿ ಕುಸಿತ ಕಂಡುಬಂದರೂ ಸಾಗರೋತ್ತರ ಹಾಗೂ ದೇಶಿಯ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಸ್ಥಿರವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.

ಮುಂಬೈನ ಚಿನ್ನದ ಮಾರುಕಟ್ಟೆಯಲ್ಲಿ ಸ್ಟ್ಯಾಂಡರ್ಡ್ ಬಂಗಾರ ( 99.5 ನಿಚ್ಚಳ )ದ ಬೆಲೆಯಲ್ಲಿ 100 ರೂ. ಹೆಚ್ಚಳವಾಗಿದ್ದು,10,040ರೂ.ಗಳಿಗೆ ತಲುಪಿದ್ದು, ನಿಚ್ಚಳ ಬಂಗಾರ (99.9 ನಿಚ್ಚಳ ) 10,085 ರೂ.ಗಳಿಗೆ ತಲುಪಿದೆ

ವೆಬ್ದುನಿಯಾವನ್ನು ಓದಿ