ದೀಯೋರಾ ರಷ್ಯಾ ಪ್ರವಾಸ

ಸೋಮವಾರ, 26 ನವೆಂಬರ್ 2007 (12:44 IST)
ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಮುರಳಿ ದೀಯೋರಾ ಇಂಧನ ಕುರಿತು ಮಾತುಕತೆಗಾಗಿ ರಷ್ಯಾ ದೇಶಕ್ಕೆ ಎರಡು ದಿನಗಳ ಪ್ರವಾಸ ಹಮ್ಮಿಕೊಂಡಿದ್ದಾರೆ.

ರಷ್ಯಾ ಮತ್ತು ಭಾರತದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ಹೈಡ್ರೋಕಾರ್ಬನ್ ಯೋಜನೆಯಲ್ಲಿ ಜಂಟಿ ಸಹಭಾಗಿತ್ವ,ಹಾಗೂ ತೈಲ ಮತ್ತು ಅನಿಲ ಉತ್ಪಾದನೆ ಕುರಿತಂತೆ ಸಾಧ್ಯಸಾಧ್ಯತೆಗಳ ಪರಿಶೀಲನೆಗಾಗಿ ರಷ್ಯಾ ಪ್ರಧಾನಿ ವಿಕ್ಟೋರ್ ಝುಬ್‌ಕೋ ಅವರ ಕರೆಯ ಮೇರೆಗೆ ದೀಯೋರಾ ರಷ್ಯಾಗೆ ಭೇಟಿ ನೀಡಿದ್ದಾರೆ.

ರಷ್ಯಾ ದೇಶದ ಸಖಾಲಿನ್ -3 ಯೋಜನೆಗೆ ಭಾರತ ಉತ್ಸಾಹ ತೋರಿದ್ದರಿಂದ ರಷ್ಯಾ 20 ಪ್ರತಿಶತ ವಿದೇಶಿ ಹಣ ಹೂಡಿಕೆಗೆ ಒಪ್ಪಂದ ಕುರಿತಂತೆ ಚರ್ಚಿಸಲಾಗುವುದು ಎಂದು ದೀಯೋರಾ ತಿಳಿಸಿದ್ದಾರೆ.

ರಷ್ಯಾದೇಶಕ್ಕೆ ಭೇಟಿ ನೀಡಿದ ಪ್ರಧಾನಿ ಅಧ್ಯಕ್ಷ ವಾಡಿಮಿರ್ ಪುಟಿನ್ ಅವರೊಂದಿಗೆ ಸಂವಾದ ನಡೆಸಿದ ಹಿನ್ನೆಲೆಯಲ್ಲಿ ದೀಯೋರಾ ಅವರ ಭೇಟಿ ನಿಗದಿಯಾಗಿದೆ.

ವೆಬ್ದುನಿಯಾವನ್ನು ಓದಿ