ದೆಹಲಿ ಚುನಾವಣೆಗಿಂತ ಮೊದಲು ಕಡಿಮೆಯಾಗಲಿದೆ ಪೆಟ್ರೋಲ್‌ ಬೆಲೆ

ಶುಕ್ರವಾರ, 29 ನವೆಂಬರ್ 2013 (20:20 IST)
PR
ಡಿಸೆಂಬರ್‌ 4ರಂದು ನಡೆಯುವ ದೆಹಲಿಯ ವಿಧಾನ ಸಭಾ ಚುನಾವಣೆಗಿಂತ ಮೊದಲು ಸರ್ಕಾರದ ತೈಲ ಕಂಪೆನಿಗಳಿ ಪೆಟ್ರೋಲ್‌ ಬೆಲೆ ಕಡಿಮೆಯಾಗುವ ಸಂಭವವಿದೆ. ಈ ಕುರಿತು ಕೊನೆಯ ನಿರ್ಧಾರ ತೆಗೆದುಕೊಳ್ಳುವ ಮೊದಲು ತೈಲ ಸಚಿವರ ಅನುಮತಿಗಾಗಿ ಕಾಯಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ .

ಸರ್ಕಾರಿ ಕಂಪೆನಿಗಳು 15 ದಿನಗಳಲ್ಲಿ ಒಂದು ಸಲ ತೈಲ ದರದ ಹೆಚ್ಚಚ್ಚು ಅಥವಾ ಕಡಿಮೆ ಮಾಡುವ ನಿರ್ಧಾರ ಮಾಡುತ್ತದೆ. ಆದರೆ ನವೆಂಬರ್‌ ತಿಂಗಳ ಮಧ್ಯದಲ್ಲಿ ತೈಲಬೆಲೆಯಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡಲಿಲ್ಲ. ಆದರೆ ಈ ಸಲ ತೈಲದ ಕಡಿಮೆ ಬೆಲೆಯಲ್ಲಿ ಆಮದುವಾದ ಕಾರಣ ತೈಲ ಬೆಲೆಯಲ್ಲಿ ಇಳಿಕೆ ಮಾಡಬಹುದಿತ್ತು ಆದರೆ ತೈಲ ಕಂಪೆನಿಗಳು ಯಾವುದೇ ಬದಲಾವಣೆ ಮಾಡಿಲ್ಲ. ಮೂಲಗಳ ಪ್ರಕಾರ ದೆಹಲಿಯ ವಿಧಾನಸಭಾ ಚುನಾವಣೆಗಿಂತ ಮೊದಲು ತೈಲಬೆಲೆಯಲ್ಲಿ ಕಡಿಮೆಯಾಗುವ ಸಾಧ್ಯತೆ ಹೆಚ್ಚಿವೆ.

ಅಕ್ಟೋಬರ್‌ 31ರಂದು ಪೆಟ್ರೋಲ್‌ ದರದಲ್ಲಿ ಕಡಿಮೆ ಮಾಡಲಾಗಿತ್ತು, ಆ ಸಮಯದಲ್ಲಿ ದೆಹಲಿಯಲ್ಲಿ ಪೆಟ್ರೋಲ್‌ಬೆಲೆಯಲ್ಲಿ 1.38 ರೂಪಾಯಿ ಇಳಿಕೆ ಮಾಡಲಾಗಿತ್ತು. ಇದರ ನಂತರವೂ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲದ ಬೆಲೆ ಕಡಿಮೆಯಾಗಿದೆ.

ವೆಬ್ದುನಿಯಾವನ್ನು ಓದಿ