ದೇಶದ ವಿದೇಶಿ ವಿನಿಮಯ ಮೀಸಲು ಸಂಗ್ರಹದಲ್ಲಿ ಕುಸಿತ

ಶನಿವಾರ, 18 ಡಿಸೆಂಬರ್ 2010 (17:35 IST)
ದೇಶದ ವಿದೇಶಿ ಮೀಸಲು ಸಂಗ್ರಹ ಡಿಸೆಂಬರ್ 10ಕ್ಕೆ ವಾರಂತ್ಯಗೊಂಡಂತೆ, 971 ಮಿಲಿಯನ್ ಡಾಲರ್‌ಗಳ ಇಳಿಕೆಯಾಗಿ 295.42 ಬಿಲಿಯನ್ ಡಾಲರ್‌ಗಳಿಗೆ ಇಳಿಕೆಯಾಗಿದೆ ಎಂದು ಫಾರೆಕ್ಸ್ ಮೂಲಗಳು ತಿಳಿಸಿವೆ.

ದೇಶದ ಹಣಕಾಸು ಸ್ಥಿತಿಗೆ ಪೂರಕವಾದ ವಿದೇಶಿ ಮೀಸಲು ಸಂಗ್ರಹ, ಪ್ರಸಕ್ತ ವಾರಂತ್ಯಕ್ಕೆ 979 ಮಿಲಿಯನ್ ಡಾಲರ್‌ಗಳ ಇಳಿಕೆಯಾಗಿ 266.25 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೊರಡಿಸಿದ ಪ್ರಕಟಣೆಯಲ್ಲಿ ಬಹಿರಂಗಪಡಿಸಿದೆ.

ಅಮೆರಿಕ ಕರೆನ್ಸಿಗಳನ್ನು ಹೊರತುಪಡಿಸಿ, ವಿಶ್ವದ ಇತರ ಕರೆನ್ಸಿಗಳ ಏರಿಳಿಕೆಯನ್ನು ಡಾಲರ್‌ಗಳಲ್ಲಿ ಅಳೆಯಲಾಗುತ್ತದೆ ಎಂದು ಆರ್‌ಬಿಐ ಮೂಲಗಳು ತಿಳಿಸಿವೆ.

ಆದರೆ, ವಿದೇಶಿ ಚಿನ್ನದ ಮೀಸಲು ಸಂಗ್ರಹದಲ್ಲಿ ಯಾವುದೇ ಬದಲಾವಣೆಯಾಗದೆ 22.124 ಬಿಲಿಯನ್ ಡಾಲರ್‌ಗಳಿಗೆ ಸ್ಥಿರವಾಗಿದೆ.

ವೆಬ್ದುನಿಯಾವನ್ನು ಓದಿ