ನಾರಾಯಣ್ ಮೂರ್ತಿ ದಕ್ಷತೆ: ಇನ್ಫೋಸಿಸ್‌ಗೆ ಭಾರಿ ಲಾಭ

ಶನಿವಾರ, 12 ಅಕ್ಟೋಬರ್ 2013 (15:11 IST)
PTI
ಕಳೆದ ಎರಡು ವರ್ಷಗಳಿಂದ ನಿರಾಶಾದಾಯಕ ತ್ರೈಮಾ ಸಿಕ ಫಲಿತಾಂಶದ ಸರಣಿ ಮುಂದುವರಿ ಸಿದ್ದ ಇನ್ಫೊಸಿಸ್‌, ಪ್ರಸಕ್ತ ಹಣಕಾಸು ವರ್ಷದ ಜುಲೈ-ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಸಕಾರಾತ್ಮಕ ಫಲಿತಾಂಶ ಪ್ರಕಟಿಸಿ ಷೇರುದಾರರಿಗೆ ಹಬ್ಬದ ಸಿಹಿ ಉಣಿಸಿದೆ.

ಎನ್‌.ಆರ್.ನಾರಾಯಣ­ಮೂರ್ತಿ ಇನ್ಫೊಸಿಸ್‌ ಕಾರ್ಯನಿರ್ವಾಹಕ ಅಧ್ಯಕ್ಷ ರಾಗಿ ಮರು ನೇಮಕಗೊಂಡ ನಂತರ ಪ್ರಕಟಿಸುತ್ತಿರುವ ಮೊದಲ ಪೂರ್ಣ ಪ್ರಮಾಣದ ತ್ರೈಮಾಸಿಕ ಫಲಿತಾಂಶ ಇದು. ಮೂರ್ತಿ ಮೋಡಿಗೆ ಮಾರುಕಟ್ಟೆ ಕೂಡ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದೆ.

ನಿವ್ವಳ ಲಾಭದಲ್ಲಿ ಕಂಪೆನಿ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 1.6ರಷ್ಟು ಮಾತ್ರ ಏರಿಕೆ ದಾಖಲಿಸಿದೆ. ರೂ 2,407 ಕೋಟಿ ನಿವ್ವಳ ಲಾಭ ಗಳಿಸಿದೆ. ಆದರೆ, 2013-14ನೇ ಸಾಲಿನ ನಾಲ್ಕೂ ತ್ರೈಮಾಸಿಕಗಳು ಸೇರಿ ಕಂಪೆನಿ ವರಮಾನ ಗಳಿಕೆಯಲ್ಲಿ ಶೇ 9ರಿಂದ ಶೇ 10ರಷ್ಟು ಪ್ರಗತಿ ಅಂದಾಜು ಮಾಡಿದೆ.

ಈ ಮೊದಲು ಶೇ 6ರಿಂದ ಶೇ 10ರಷ್ಟು ವರಮಾನ ಬರಬಹುದು ಎಂದು ಅಂದಾಜು ಮಾಡಲಾಗಿತ್ತು. ಜತೆಗೆ ರೂಪಾಯಿ ಮೂಲಕ ಬರುವ ವರಮಾನವೂ ಶೇ 21ರಿಂದ 22ರಷ್ಟು ಹೆಚ್ಚುವ ನಿರೀಕ್ಷೆ ಇದೆ ಕಂಪೆನಿ ಹೇಳಿದೆ. ಇದು ಮಾರುಕಟ್ಟೆಗೆ ದೊಡ್ಡ ಪ್ರಮಾಣ ದಲ್ಲಿ ಉತ್ತೇಜನ ನೀಡಿದೆ.

ವೆಬ್ದುನಿಯಾವನ್ನು ಓದಿ