ನೆಟ್ಟಲ್ಲೂ ರಾಹುಲ್, ಕತ್ರಿನಾ, ಸಾನಿಯಾಗೆ ಭಾರೀ ಬೇಡಿಕೆ

ಶುಕ್ರವಾರ, 18 ಡಿಸೆಂಬರ್ 2009 (09:36 IST)
ಗೂಗಲ್ ಸರ್ಚ್ ಇಂಜಿನ್‌ನಲ್ಲಿ 2009ರ ಈ ವರ್ಷದಲ್ಲಿ ಅತೀ ಹೆಚ್ಚು ಮಂದಿ ಕುಟ್ಟಿದ್ದು ರಾಹುಲ್ ಗಾಂಧಿ, ಕತ್ರಿನಾ ಕೈಫ್, ಸಾನಿಯಾ ಮಿರ್ಜಾ, ಸಚಿನ್ ತೆಂಡೂಲ್ಕರ್ ಮುಂತಾದ ಖ್ಯಾತನಾಮರ ಹೆಸರುಗಳನ್ನಂತೆ.

ಈ ವರ್ಷ ಭಾರತದಲ್ಲಿ ಅತೀ ಹೆಚ್ಚು ಶೋಧಕ್ಕೊಳಗಾದ ವ್ಯಕ್ತಿಗಳು ಮತ್ತು ಇತರ ವಿಚಾರಗಳ ಕುರಿತು ಗೂಗಲ್ ತನ್ನ ವರದಿಯನ್ನು ಬಿಡುಗಡೆಗೊಳಿಸಿದ್ದು, ನಿರೀಕ್ಷೆಯಂತೆ ಪ್ರಸಿದ್ಧ ಬಾಲಿವುಡ್, ರಾಜಕೀಯ ಮತ್ತು ಕ್ರೀಡಾಪಟುಗಳೇ ಅಗ್ರ ಸ್ಥಾನ ಪಡೆದುಕೊಂಡಿದ್ದಾರೆ.

ಜನಪ್ರಿಯ ಕ್ರೀಡಾಪಟುಗಳ ಶೋಧದಲ್ಲಿ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅಗ್ರ ಸ್ಥಾನದಲ್ಲಿದ್ದರೆ, ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ನಂತರದ ಸ್ಥಾನ ಪಡೆದಿದ್ದಾರೆ. ಮೂರನೇ ಸ್ಥಾನವನ್ನು ಡಬ್ಲ್ಯೂಡಬ್ಲ್ಯೂಇ ರೆಸ್ಲರ್ ಜಾನ್ ಸಿನಾ ಅಚ್ಚರಿಯಾಗಿ ಪಡೆದಿದ್ದಾರೆ.

ಮೊಬೈಲ್ ಬ್ರೌಸಿಂಗ್‌ನಲ್ಲಿ ಅತೀ ಹೆಚ್ಚು ಬಳಕೆಯಾಗಿರುವುದು ಆರ್ಕುಟ್. ಕತ್ರಿನಾ ಕೈಫ್ ಮತ್ತು ಐಶ್ವರ್ಯಾ ರೈ ನಂತರದ ಸ್ಥಾನಗಳಲ್ಲಿದ್ದಾರೆ.

ಜನಪ್ರಿಯ ತಾರೆಗಳ ಸಾಲಿನಲ್ಲಿ ಕತ್ರಿನಾ ಕೈಫ್ ಅಗ್ರೆ. ಮೈಕೆಲ್ ಜಾಕ್ಸನ್ ಮತ್ತು ಸಲ್ಮಾನ್ ಖಾನ್‌ಗೆ ನಂತರದ ಸ್ಥಾನಗಳು.

ಪ್ರಸಿದ್ಧ ರಾಜಕಾರಣಿಗಳಲ್ಲಿ ಯುವ ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ ಮುಂಚೂಣಿಯಲ್ಲಿದ್ದಾರೆ. ಇಂದಿರಾ ಗಾಂಧಿ ಹೆಸರನ್ನು ಈಗಲೂ ಭಾರೀ ಪ್ರಮಾಣದಲ್ಲಿ ಟೈಪಿಸಲಾಗುತ್ತಿದೆ. ಸಚಿನ್ ಪೈಲಟ್ ಮೂರನೇ ಸ್ಥಾನಿ.

ಗೂಗಲ್‌ನಲ್ಲಿ 'ಹೇಗೆ?' ಎಂದು ಸಹಾಯ ಬಯಸುವವರ ಸಂಖ್ಯೆಯೂ ಬಹಳ. ಇಲ್ಲಿ ಕಿಸ್, ಹ್ಯಾಕ್ ಮತ್ತು ಮಿಡಿಟೇಟ್ ಮಾಡೋದು ಹೇಗೆ ಎಂದು ಹೆಚ್ಚು ಪ್ರಶ್ನೆಗಳನ್ನು ಬ್ರೌಸಿಗರು ಕೇಳಿದ್ದಾರಂತೆ.

ವೆಬ್ದುನಿಯಾವನ್ನು ಓದಿ