ನೋ ಕೆಮಿಕಲ್ಸ್ ಹಬ್, ನೋ ಟಾಟಾ ಮನಿ: ಮಮತಾ

ಶುಕ್ರವಾರ, 29 ಮೇ 2009 (12:17 IST)
ಪಶ್ಚಿಮ ಬಂಗಾಳದ ನಯಾಚಾರ್‌ನಲ್ಲಿ ರಸಾಯನಿಕ ತಯಾರಿಕೆ ಕೇಂದ್ರವನ್ನು ಸ್ಥಾಪಿಸಲು ಉದ್ದೇಶಿಸಿರುವ ಟಾಟಾ ಗ್ರೂಪ್‌ ನಿರ್ಧಾರವನ್ನು ಜಾರಿಗೆ ತರಲು ಬಿಡುವುದಿಲ್ಲ. ನೋ ಕೆಮಿಕಲ್ಸ್ ಹಬ್ ನೋ ಟಾಟಾ ಮನಿ ಎಂದು ಕೇಂದ್ರ ರೈಲ್ವೆ ಖಾತೆ ಸಚಿವೆ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಪರಿಸರ ವಿರೋಧಿಯಾದ ರಸಾಯನಿಕ ಕೇಂದ್ರ ಸ್ಥಾಪನೆಗೆ ನಮ್ಮ ವಿರೋಧವಿದೆ. ಡೊ ಕೆಮಿಕಲ್ಸ್‌ನಿಂದ ಸಂಭವಿಸಿದ ಭೂಪಾಲ್‌ ದುರಂತ ಕಣ್ಣದುರಿಗೆ ಇರುವುದರಿಂದ ರಸಾಯನಿಕ ಕೇಂದ್ರಕ್ಕೆ ಅನುಮತಿ ನೀಡಿ ಮತ್ತೆ ಅಂತಹ ದುರಂತವನ್ನು ಅಹ್ವಾನಿಸುವುದು ಸಾಧ್ಯವಿಲ್ಲ ಎಂದು ಸಚಿವೆ ಮಮತಾ ಕಿಡಿಕಾರಿದ್ದಾರೆ.

ಪಶ್ಚಿಮ ಬಂಗಾಳದಿಂದ ಟಾಟಾರವರ ನ್ಯಾನೋ ಕಾರು ಯೋಜನೆ ಸ್ಥಳಾಂತರಕ್ಕೆ ಕಾರಣವಾದ ಮಮತಾ ಬ್ಯಾನರ್ಜಿ, ಚುನಾವಣೆಗಾಗಿ ಟಾಟಾ ಟ್ರಸ್ಟ್‌ನಿಂದ ಬಂದ 22 ಲಕ್ಷ ರೂಪಾಯಿಗಳ ಚೆಕ್‌ನ್ನು ಮರಳಿಸಿ ಸೌಜನ್ಯ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ