ನ್ಯಾನೋಗೆ ಮಾಲಿನ್ಯ ಮಂಡಳಿಯಿಂದ ನಿರಾಕ್ಷೇಪಣಾ ಪತ್ರ

ಸೋಮವಾರ, 24 ನವೆಂಬರ್ 2008 (12:07 IST)
ಅಹಮದಾಬಾದ್ : ಟಾಟಾ ಮೋಟಾರ್ಸ್‌ನ ಬಹುನಿರೀಕ್ಷಿತ ನ್ಯಾನೊ ಕಾರು ಯೋಜನೆಯನ್ನು ಮುಂದುವರಿಸುವಂತೆ ಗುಜರಾತ್ ಮಾಲಿನ್ಯ ಅಧಿಕಾರಿಗಳು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ಟಾಟಾ ಮೂಲಗಳು ತಿಳಿಸಿವೆ.

ಗುಜರಾತ್ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನಿರಾಕ್ಷೇಪಣಾ ಪತ್ರ ನೀಡಲಾಗಿದ್ದು, ಕಟ್ಟಡ ನಿರ್ಮಾಣ ಕಾರ್ಯ ಆರಂಭಿಸುವಂತೆ ಟಾಟಾ ಮೋಟಾರ್ಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಪಿಸಿಬಿ ಅಧ್ಯಕ್ಷ ಸಿ.ಎಲ್. ಮೀನಾ ತಿಳಿಸಿದ್ದಾರೆ.

ಆರಂಭಿಕ ಹಂತದಲ್ಲಿ ಸಾರ್ವಜನಿಕ ವಿಚಾರಣೆ ಅಗತ್ಯವಿಲ್ಲ. ಪರಿಸರ ಇಲಾಖೆ ಟಾಟಾ ಮೋಟಾರ್ಸ್‌ಗೆ ಅನುಮತಿ ನೀಡಿದ ನಂತರ ಸಾರ್ವಜನಿಕ ವಿಚಾರಣೆ ನಡೆಸಲಾಗುವುದು ಎಂದು ಮೀನಾ ತಿಳಿಸಿದ್ದಾರೆ.

ಸರಕಾರದ ಮುಖ್ಯ ಕಾರ್ಯದರ್ಶಿ ಡಿ.ರಾಜ್‌ಗೋಪಾಲನ್ ಯೋಜನೆಯ ಮೇಲ್ವಿಚಾರಣೆಯನ್ನು ನಡೆಸುತ್ತಿದ್ದು, ಕೇವಲ ಒಂದು ತಿಂಗಳ ಅವಧಿಯಲ್ಲಿ ತಡೆ ರಹಿತ ಅಕ್ಷೇಪಣಾ ಪತ್ರ ನೀಡಿ ಯೋಜನೆಯನ್ನು ಸಮರೋಪಾದಿಯಲ್ಲಿ ಮುಂದುವರಿಸುವಂತೆ ಟಾಟಾ ಮೋಟಾರ್ಸ್‌ಗೆ ಸಹಕಾರ ನೀಡಲಾಗಿದೆ ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ